ಸ್ವಂತ ಅಣ್ಣನನ್ನೇ ಹತ್ಯೆಗೈದ ತಮ್ಮ : ಕಾರಣ ‘ಅವಳು’.!

ಜನಸ್ಪಂದನ ನ್ಯೂಸ್, ದೊಡ್ಡಬಳ್ಳಾಪುರ :  ಎಲ್ಲೆಡೆ ದಸರಾ ಸಂಭ್ರಮ ಆಚರಿಸುತ್ತಿದ್ದರೆ ಇತ್ತ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ಅಹಿತಕರ ಘಟನೆ ನಡೆದು ಹೋಗಿದೆ.

ಸ್ವಂತ ತಮ್ಮನಿಂದಲೇ ಅಣ್ಣನೊಬ್ಬ ಕೊಲೆಯಾಗಿ ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ನಡೆದಿದೆ. ತಮ್ಮನಿಂದಲೇ ಕೊಲೆಯಾಗಿ ಹೋದ ನತದೃಷ್ಟ ಅಣ್ಣ ಗಂಗರಾಜು (35) ಎಂದು ಗೊತ್ತಾಗಿದೆ.

ಮಲಗಿರುವ ಸಮಯದಲ್ಲಿ ಗಂಗರಾಜು ತಲೆ ಮೇಲೆ‌ ಕಲ್ಲು ಎತ್ತುಹಾಕಿ ತಮ್ಮ ರವಿ ಕೊಲೆ ಮಾಡಿದ್ದಾ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಮೃತ ಗಂಗರಾಜು ಆತನ ಸಹೋದರನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ ಎನ್ನಲಾಗಿದೆ.

ಇದೇ ವಿಷಯವಾಗಿ ಕಳೆದ 15 ದಿನಗಳ ಹಿಂದೆ ತಮ್ಮ ರವಿಯೊಂದಿಗೆ ಗಂಗರಾಜು ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಹೊಡೆದಾಡಿಕೊಂಡಿದ್ದರು. ಬಳಿಕ ಸಿಟ್ಟಿಗೆದ್ದ ರವಿ ಸೋಮವಾರ ರಾತ್ರಿ ಬಂದು ಗಂಗರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ :‌ ಸುಮ್ಮನೇ ನಿಂತಿದ್ದ ಗೂಳಿ ಮುಂದೆ ಬಂದ ಕುಡುಕ ; ಮುಂದೆನಾಯ್ತು ಈ ವಿಡಿಯೋ ನೋಡಿ.

ಘಟನೆ ಬಗ್ಗೆ ಸ್ಥಳೀಯರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.