ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳಾ ಆರೋಪಿಯೋರ್ವಳು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನಲೇಯಲ್ಲಿ ಆರೋಪಿ ಮಹಿಳೆಯನ್ನು ಲೇಡಿ ಪೊಲೀಸ್ ಸಿಬ್ಬಂದಿ ಸೆರೆಹಿಡಿದು ಕೈ-ಕಾಲು ಕಟ್ಟಿ ರಸ್ತೆಯ ಮಧ್ಯೆ ಎಳೆದುಕೊಂಡು ಬಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ದೂರದ ಜಾರ್ಖಂಡ್ ನಲ್ಲಿ ಎಂದು ತಿಳಿದು ಬಂದಿದೆ. ಮೊಬೈಲ್ ಕಳ್ಳತನದ ಆರೋಪದ ಮೇಲೆ ಪತಿ ಮತ್ತು ಪತ್ನಿಯನ್ನು ಸೆಕ್ಟರ್ 4 ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದ ಸಮಯದಲ್ಲಿ ಆರೋಪಿತ ಮಹಿಳಾ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಕೂಡಲೇ ಕಾರ್ಯಪ್ರವರ್ತರಾದ ಬೊಕಾರೊ ಪೊಲೀಸ್ ಠಾಣೆಯ ಲೇಡಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಚೇಸ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ನಿರ್ಮಾಣ ಹಂತದ 5ನೇ ಮಹಡಿಯಿಂದ ಕೆಳಗೆ ಜಿಗಿದ ನಾಯಿ ; ಮುಂದೆನಾಯ್ತು ಈ ವೈರಲ್ ವಿಡಿಯೋ ನೋಡಿ.
ಈ ವೇಳೆ ಮಹಿಳಾ ಆರೋಪಿಯ ಕೈ ಮತ್ತು ಕಾಲನ್ನು ಹಗ್ಗದಿಂದ ಕಟ್ಟಿ ನೇಣು ಹಾಕಿಕೊಂಡು ಠಾಣೆಗೆ ಕರೆತಂದರು. ಠಾಣೆಗೆ ತರುವಾಗ ಪೊಲೀಸರು ಆಕೆಯನ್ನು ರಸ್ತೆಯ ಮಧ್ಯೆ ಎಳೆದೊಯ್ದತ್ತಿದ್ದಾಗ ಆ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ರಿಕಾರ್ಡ್ ಮಾಡಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜಾರ್ಖಂಡ್‌ನ ಬೊಕಾರೊ ಪೊಲೀಸರ ಈ ಅಮಾನವೀಯ ವರ್ತನೆಗೆ ವ್ಯಾಪಕ ಟೀಕೆಗೆ ಗುರಿಯಾಗಿಸಿದೆ.
झारखंड के बोकारो पुलिस का अमानवीय व्यवहार।थाना से फरार महिला को महीला पुलिस ने रस्सी से टांग कर लाया थाना।
बोकारो के चास महिला थाना से महिला हो गई थी फरार,मोबाइल चोरी करने के आरोप में पति-पत्नी को सेक्टर चार थाना पुलिस ने किया था गिरफ्तार,मौका देखकर महिला हुई थी भागने में… pic.twitter.com/E5wLfMpYOL— Sohan singh (@sohansingh05) October 21, 2023