ಗೋಕಾಕ : ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರು ಗಂಭೀರ..!

ಜನಸ್ಪಂದನ ನ್ಯೂಸ್, ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಧುಪದಾಳದ ಮುಖ್ಯ ರಸ್ತೆಯಲ್ಲೇ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರಿಗೂ ಗಂಭೀರವಾದ ಗಾಯಗಳಾದ ಘಟನೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

ನಾಗಪ್ಪ ಭೀಮಪ್ಪ ಬೆಳಮರಡಿ (44) ಹಾಗೂ ಪತ್ನಿ ಕಸ್ತೂರಿ ನಾಗಪ್ಪ ಬೆಳಮರಡಿ (40) ಕೊಣ್ಣೂರ ಪಟ್ಟಣದ ನಿವಾಸಿಗಳಾಗಿದ್ದು, ಘಟಪ್ರಭಾ ಪಟ್ಟಣದಿಂದ ತಮ್ಮ ಸ್ವಂತ ಊರಾದ ಕೊಣ್ಣೂರಿಗೆ ಮರಳುತ್ತಿದ್ದಾಗ, ಎದುರಿಗೆ ಕೊಣ್ಣೂರು ಕಡೆಯಿಂದ ಬರುತ್ತಿದ್ದ ಇನ್ನೋರ್ವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ಕೊಣ್ಣೂರು ಕಡೆಯಿಂದ ಬರುತ್ತಿದ್ದ ವ್ಯಕ್ತಿಯನ್ನು ಬೆಲ್ಲದ ಬಾಗೇವಾಡಿ ನಿವಾಸಿ ಚಂದನ ನಾಗಪ್ಪ ದೊಡಮನಿ (24) ಎಂದು ತಿಳಿದುಬಂದಿದೆ.

ಎದುರು ಬದುರು ಡಿಕ್ಕಿ ಹೊಡೆದ ರಭಸಕ್ಕೆ ಒಂದು ಬೈಕ್ ನುಜ್ಜು ಗುಜ್ಜಾಗಿದೆ.

ಇನ್ನು ದುರ್ಘಟನೆಯಿಂದ ಬೈಕ್ ಸವಾರರಿಬ್ಬರಿಗೆ ಮಾರಣಾಂತಿಕ ಗಂಭೀರವಾದ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಬೈಕ್ ನಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟಗಳಾಗಿವೆ.

ಅಪಘಾತವಾದ ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಘಟಪ್ರಭಾ ಪೊಲೀಸರು ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದರು.