ಪ್ರೇಯಸಿಯ ನಗ್ನ ಪೋಟೋ ಪೋಸ್ಟ್ ಮಾಡಿದ ವಿಕೃತ ಕಾಮಿ ಅರೆಸ್ಟ್..!

ಜನಸ್ಪಂದನ ನ್ಯೂಸ್, ಬೆಂಗಳೂರು : ಯುವಕನೋರ್ವ ತನ್ನ ಪ್ರೇಯಸಿಯ ನಗ್ನ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಏನೂ ಗೊತ್ತಿಲ್ಲದವನಂತೆ ಆಕೆಯೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಂಜಯ್‌ ಕುಮಾರ್‌ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಾಗೂ ಇತನ ಪ್ರಿಯತಮೆ ಇಬ್ಬರೂ ತಮಿಳುನಾಡಿನ ವೆಲ್ಲೂರು ಮೂಲದವರು. ಇಬ್ಬರೂ ಬಿ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದರು.

ಸಂಜಯ್‌ ಹಾಗೂ ಆತನ ಸ್ನೇಹಿತರು 12 ಜನ ಟೆಲಿಗ್ರಾಂ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಮೊದಲಿಗೆ ಅರೆನಗ್ನ ಪೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಬಳಿಕ ಆ ಪೋಟೊಗಳೊಂದಿಗೆ ಯುವತಿಯರ ಅರೆನಗ್ನ ಫೋಟೋಗಳನ್ನು ಸೃಷ್ಟಿಸುವ ಸಲುವಾಗಿ ತಾನೇ ಪ್ರೋಗ್ರಾಂ ಬರೆದು bot ಹೆಸರಿನ ಆಯಪ್‌ ಸಿದ್ಧಪಡಿಸಿದ್ದ. ಅದರಲ್ಲಿ ಅಕ್ಕಪಕ್ಕದ ಯುವತಿಯರ ಅಶ್ಲೀಲ ಸೃಷ್ಟಿಸಿ ಗ್ರೂಪ್‌ನಲ್ಲಿ ಹಂಚಿ ವಿಕೃತಿ ಮೆರೆಯುತ್ತಿದ್ದ. ನಂತರ ಇವುಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ.

ನೂರಾರು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸಿದ್ದನು. ಅಲ್ಲದೇ ಗರ್ಲ್‌ಫ್ರೆಂಡ್‌ ಫೋಟೋವನ್ನು ಕೂಡ ಮಾರ್ಪಡಿಸಿ ಗ್ರೂಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದನು. ಶೇರ್ ಆಗುತ್ತಿದ್ದಂತೆ ಪೋಟೊ ನೋಡಿ ಸಂಜಯ್ ಪ್ರೇಯಸಿ ಶಾಕ್ ಆಗಿದ್ದಳು.

ಆಬಳಿಕ ಆಕೆಯೊಂದಿಗೆ ದೂರು ನೀಡಲು ಪೊಲೀಸ್ ಠಾಣೆಗೆ ಅಮಾಯಕನಂತೆ ವರ್ತಿಸಿದ್ದನು.