ಡಿಜೆ ಸದ್ದಿನ ಅಬ್ಬರಕ್ಕೆ ಹೃದಯಾಘಾತ ; ಯುವಕ ಸಾವು..!

ಜನಸ್ಪಂದನ ನ್ಯೂಸ್, ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿಯ ಪ್ರಶಾಂತ ನಗರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆ ವೇಳೆ ಡ್ಯಾನ್ಸ್ ಮಾಡುತ್ತಲೇ ಯುವಕ ಸುದೀಪ್ ಸಜ್ಜನ್ (23) ಕುಸಿದು ಬಿದ್ದು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.

ಪ್ರಶಾಂತ ನಗರದ ಯುವಕ ಸುದೀಪ್ ಸಜ್ಜನ್ (23) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.

ಈತ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನಾಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಬಡಾವಣೆಯ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ವಿಸರ್ಜನಾ ಮೆರವಣಿಗೆಗೆ ಮಹಾರಾಷ್ಟ್ರದ ಪುಣೆಯಿಂದ ಡಿಜೆ ತರಿಸಿದ್ದರು. ರಾತ್ರಿ ಆರಂಭವಾಗಿದ್ದ ಡಿಜೆ ಅಬ್ಬರಕ್ಕೆ ಯುವಜನತೆ ಕುಣಿದು ಕುಪ್ಪಳಿಸುತ್ತಿದ್ದರು.

ಕುಣಿಯುವಾಗ ಸುದೀಪ್ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿ ಮೆರವಣಿಗೆ ಮೊಟಕುಗೊಳಿಸಿ ಗಣಪತಿ ವಿಸರ್ಜನೆ ಮುಗಿಸಿದರು ಎಂದು ತಿಳಿದುಬಂದಿದೆ.