ಗೋಕಾಕ : ಮಹಿಳೆಗೆ ಚಾಕು ಇರಿದು ಬಳಿಕ ವಿಷ ಕುಡಿದು ಆಸ್ಪತ್ರೆ ಸೇರಿದ ಆರೋಪಿ.!

ಜನಸ್ಪಂದನ ನ್ಯೂಸ್, ಘಟಪ್ರಭಾ : ಘಟಪ್ರಭಾ ನಗರದ ರೇಲ್ವೆ ನಿಲ್ದಾಣದಿಂದ ಮಲ್ಲಿಕಾರ್ಜುನ ನಗರದ ಮೂಲಕ ಜೆಜಿಕೋ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ವ್ಯಕ್ತಿಯೋರ್ವ ಮಹಿಳೆಗೆ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದಿದೆ.

ಮಹಿಳೆಗೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಪಟ್ಟಣದ ನಿವಾಸಿಯಾದ ಮಲ್ಲಿಕಾರ್ಜುನ ಕಂಬಾರ (47) ಎಂದು ಹೇಳಲಾಗುತ್ತಿದೆ. ಈ ವ್ಯಕ್ತಿ ಉಡುಪಿ ಮೂಲದ ನಯನಾ ಪ್ರವೀಣ ಶೆಟ್ಟಿ (34) ಎಂಬ ಮಹಿಳೆಗೆ ಚಾಕುವಿನಿಂದ ಅನೇಕ ಭಾರಿ ಇರಿದು ಹಲ್ಲೆ ಮಾಡಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿವೆ.

ಹಲ್ಲೆಗೊಳಗಾದ ಮಹಿಳೆ ಮತ್ತು ಅವಳ ಪತಿ ಜೆಜಿಕೋ ಆಸ್ಪತ್ರೆಯ ಹತ್ತಿರ ಹೊಟೇಲ್ ಒಂದರಲ್ಲಿ ಕೆಲಸ ಮಾಡತ್ತಿದ್ದರೆಂದು ಹೇಳಲಾಗುತ್ತಿದೆ.

ಇಂದು ಮಟಮಟ ಮಧ್ಯಾಹ್ನ ಮಹಿಳೆ ಮನೆಗೆ ಹೋಗುವಾಗ ಹಿಂಬಾಲಿಸಿ ಹಲ್ಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಆರೋಪಿ ಹಲ್ಲೆ ಮಾಡುವ ವೇಳೆ ಸಾರ್ವಜನಿಕರಿಗೆ ಹೆದರಿ ಚಾಕು ಬಿಸಾಕಿ ಓಡಿ ಹೋಗಿದ್ದಾನೆ ಎನ್ನಲಾಗುತ್ತಿದೆ.

ಹಲ್ಲೆ ಮಾಡಿದ ವ್ಯಕ್ತಿ ತದ ನಂತರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೂಡಲೇ ಕುಟುಂಬ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯು ಸಹ ಹೇಗೋ ಘಟಪ್ರಭಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ಕಾರಣ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗಿದ್ದು, ಮಾಹಿತಿ ಇನ್ನಷ್ಟು ಹೊರಬರಬೇಕಿದೆ.

ಘಟನೆ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.