ರೆಫ್ರಿಜರೇಟರ್ ಕಂಪ್ರೆಸರ್ ಸ್ಫೋಟ : ಐವರ ಸಾವು..!

ಜನಸ್ಪಂದನ ನ್ಯೂಸ್, ಡೆಸ್ಕ್ : ರೆಫ್ರಿಜರೇಟರ್ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ನಡೆದಿದೆ.

ಇನ್ನೂ ಈ ಘಟನೆ ಸೋಮವಾರ ಪಂಜಾಬ್ ನ ಜಲಂಧರ್ ಜಿಲ್ಲೆಯ ನಿವಾಸವೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸಾವನ್ನಪ್ಪಿದವರು ಯಶ್ ಪಾಲ್ ಘಾಯ್ (70), ರುಚಿ ಘಾಯ್ (40), ಮನ್ಷ (14), ದಿಯಾ (12) ಹಾಗೂ ಅಕ್ಷಯ್ (10) ಎಂದು ವರದಿಯಾಗಿದೆ.

ಸ್ಫೋಟದ ನಿಖರ ಕಾರಣವನ್ನು ತಿಳಿಯಲು ಮಾದರಿಗಳನ್ನು ಸಂಗ್ರಹಿಸುವ ಸಲುವಾಗಿ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡವೊಂದನ್ನು ಕರೆಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕಂಪ್ರೆಸರ್ ಸ್ಫೋಟಗೊಂಡ ನಂತರ ಮನೆಗೆ ಬೆಂಕಿ ಹತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಫ್ರಿಜರೇಟರ್ ಕಂಪ್ರೆಸರ್ ಸ್ಫೋಟ : ಐವರ ಸಾವು..!