ಅನೈತಿಕ ಸಂಬಂಧದ ಹಿನ್ನೆಲೆ : ಸ್ವಂತ ತಮ್ಮನನ್ನೇ ಹತ್ಯೆ ಮಾಡಿದ ಅಣ್ಣ.!

ಜನಸ್ಪಂದನ ನ್ಯೂಸ್, ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಎಚ್ಆರ್’ಎಸ್ ಕಾಲೋನಿಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ ತಮ್ಮನನ್ನು ಸ್ವಂತ ಅಣ್ಣನೇ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೌಲಾ ಹುಸೇನ್ (30) ಎಂಬಾತನನ್ನು ಅಣ್ಣ ನೂರ್ ಅಹ್ಮದ್ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಮೂಲತಃ ಗಂಗಾವತಿ ಕಿಲ್ಲಾ ಏರಿಯಾದವರಾದ ಇವರು ಇತ್ತೀಚಿಗೆ ಎಚ್.ಆರ್.ಎಸ್. ಕಾಲೋನಿಯ ಅಖಂಡೇಶ್ವರ ದೇವಸ್ಥಾನದ ಸಮೀಪ ಮನೆ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದರು.

ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮೌಲಾ ಹುಸೇನ್’ನನ್ನು ಕತ್ತು ಸೀಳಿ ಕೊಲೆ ಮಾಡಿರುವ ಆರೋಪಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.