ಯುವತಿ ಜೊತೆ ಅರೆನಗ್ನ ಸ್ಥಿತಿಯಲ್ಲಿರುವ ಬಿಜೆಪಿ ಕಾರ್ಯಕರ್ತನ ಪೋಟೋ ವೈರಲ್.!

ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಅರೆನಗ್ನ ಫೋಟೊ ವೈರಲ್ ಆಗಿದೆ.

ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗೆ ರೂಂ ಒಂದರಲ್ಲಿ ಸೆಲ್ಫಿಗೆ ಫೋಸ್ ಕೊಟ್ಟ ಫೋಟೊ ವೈರಲ್ ಆಗುತ್ತಿದೆ.

ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ಪನಡ್ಕ ನಿವಾಸಿ ನವೀನ್ ರೈ ಅವರ ಫೋಟೊ ವೈರಲ್‌ ಆಗುತ್ತಿದೆ. ಇವರು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನೂ ಈ ಕುರಿತು ನವೀನ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಫೋಟೋವನ್ನ ಬೇರೆ ಯುವತಿಯೊಬ್ಬಳ ಜೊತೆ ಎಡಿಟ್ ಮಾಡಿ ವೈರಲ್ ಮಾಡಿ ಮಾನಹಾನಿ ಮಾಡಲಾಗಿದೆ.

ಪುತ್ತಿಲ ಪರಿವಾರ -1ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಈ ಪೋಟೋವನ್ನು ದಿನೇಶ್ ಪುತ್ತೂರು ಎಂಬವರು ಶೇರ್‌ ಮಾಡಿದ್ದಾರೆ ಎಂದು ಮಾನಹಾನಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.