ಹಳಿ ಮೇಲೆ ನಿಂತು ರೀಲ್ಸ್ ಮಾಡಲು ಮುಂದಾದ ಬಾಲಕ, ರೈಲು ಡಿಕ್ಕಿಯಾಗಿ ಸಾವು ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಜನ ಇತ್ತೀಚೆಗೆ ರೀಲ್ಸ್‌ ವ್ಯಾಮೋಹಕ್ಕೆ ಒಳಗಾಗಿ ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಅಷ್ಟೆ ಏಕೆ ಕಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಷ್ಟಾದರೂ ನಾವು ಬುದ್ದಿ ಮಾತ್ರ ಕಲಿತಿಲ್ಲಾ.

ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಇದೇ ರೀಲ್ಸ್‌ಗೆ ಅಪ್ರಾಪ್ತ ಬಾಲಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್‌ ಮಾಡಲು ಮುಂದಾದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಬಾಲಕ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.

ಫಾರ್ಮನ್ ಎಂಬ 14 ವರ್ಷದ ಬಾಲಕ ರೀಲ್ಸ್‌ಗೆ ಫೋಸು ಕೊಡಲು ರೈಲ್ವೆ ಹಳಿ ಸಮೀಪ ಹಳಿ ಮೇಲೆ ಕಾಲಿಡುತ್ತಿದ್ದಂತೆಯೇ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದರೆ ಇದೊಂದು ಭಯಾನಕ ಮತ್ತು ಆಘಾತಕಾರಿ ದೃಶ್ಯವನ್ನು ಒಳಗೊಂಡಿದೆ.

ಅಷ್ಟೆ ಅಲ್ಲಾ ಬಾಲಕ ಈತ ಸಾಯುವ ಕೊನೆ ಕ್ಷಣದ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ರೀಲ್ಸ್‌ಗಾಗಿ ಫಾರ್ಮನ್‌ ಆಕ್ಟ್ ಮಾಡುತ್ತಿದ್ದರೆ ಗೆಳೆಯ ಈ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದು, ಏಕಾಏಕಿ ಸಂಭವಿಸಿದ ಘಟನೆಯಿಂದ ಆತ ಆಘಾತಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.

ಫಾರ್ಮನ್ ಉತ್ತರಪ್ರದೇಶದ ಜಹಾಂಗೀರ್‌ ಬಾದ್‌ ನ ತೇರಾ ದೌಲತ್‌ ಪುರದ ನಿವಾಸಿ ಮುನ್ನಾ ಎಂಬವರ‌ ಪುತ್ರ ಎಂದು ಗುರುತಿಸಲಾಗಿದೆ.