ಜನಸ್ಪಂದನ ನ್ಯೂಸ್, ಡೆಸ್ಕ್ : ಫರ್ಸ್ಟ್ ನೈಟ್ ದಿನ ಹಾಲು ಹಿಡಿದುಕೊಂಡು ಕೋಣೆಗೆ ಬಂದ ಹೆಂಡತಿ, ನಾನು ನಿನ್ನ ಪತ್ನಿಯಲ್ಲ, ತಾಯಿ ಇದ್ದಂತೆ. ಪ್ರತಿ ದಿನ ನೀನು ನನ್ನ ಕಾಲು ಮುಟ್ಟಿ ನಮಸ್ಕರಿಸಿ ಪೂಜೆ ಸಲ್ಲಿಸಬೇಕು ಎಂದು ಹೇಳಿದಾಗ ಪತಿ ತಬ್ಬಿಬ್ಬಾಗಿದ್ದಾನೆ. ಮೊದಮೊದಲು ಜೋಕ್ ಮಾಡುತ್ತಿರಬಹುದು ಎಂದುಕೊಂಡ ಪತಿಗೆ ಆಕೆ ಹೇಳುತ್ತಿರುವುದು ನಿಜ ಎನ್ನುವುದು ಕೆಲ ದಿನಗಳ ಬಳಿಕ ಅರಿವಿಗೆ ಬಂದಿದೆ.
ಉತ್ತರ ಪ್ರದೇಶದ ಗೋರಖ್‌ಪುರದ ಜಂಘಾ ಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರ ಮದುವೆ ಸುದ್ದಿ ಈಗ ಭಾರೀ ಸದ್ದು ಮಾಡ್ತಿದೆ.
ಉಪನ್ಯಾಸಕ ರವೀಂದ್ರ ಕುಮಾರ್ ಅವರ ಮದುವೆ ವಿಚಾರ ವೈರಲ್ ಆಗಿದೆ. 2023ರ ಫೆಬ್ರವರಿ 24 ರಂದು ಮದುವೆಯಾಗಿದ್ದ ರವೀಂದ್ರ ಕುಮಾರ್, ಸದ್ಯ ನನ್ನನ್ನು ಕಾಪಾಡಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮಡದಿ ಹೇಳಿದ ಹಾಗೆ ಪ್ರತಿದಿನ ಪೂಜೆ ಮಾಡದ ಕಾರಣ ಆಕೆ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಯ ಪೋಷಕರಿಗೆ ಈ ವಿಚಾರ ತಿಳಿಸಿದ್ದಯ, ಅವರು ಕೂಡ ರವೀಂದ್ರ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ರವೀಂದ್ರ ಕುಮಾರ್ ಮುಜಾಫರ್‌ನಗರ ಜಿಲ್ಲೆಯ ಘಟಪನ್ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಶಿಕ್ಷಕ. ಇದೇ ವರ್ಷದ ಫೆಬ್ರವರಿ 24ರಂದು ಶಾಮ್ಲಿ ಜಿಲ್ಲೆಯ ಅದರ್ಶ್ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಮದುವೆಯಾಗಿದ್ದರು. ಬಳಿಕ ತನ್ನ ಪತ್ನಿ, ‘ನಾನು ನಿನ್ನ ತಾಯಿಯಿದ್ದಂತೆ, ಅದೇ ರೀತಿಯಲ್ಲಿ ಪೂಜೆ ಮಾಡಬೇಕು. ನನ್ನ ಕಾಲುಗಳನ್ನು ಮುಟ್ಟಿ ಪ್ರತಿ ದಿನ ನಮಸ್ಕಾರ ಮಾಡಬೇಕು. ಇಲ್ಲದೇ ಇದ್ದಲ್ಲಿ ನಾನು ನಿಮ್ಮೆಲ್ಲರನ್ನೂ ಸಾಯಿಸುತ್ತೇನೆ. ಇಲ್ಲದೇ ಇದ್ದಲ್ಲಿ ನಾನೇ ಆತ್ಮಹತ್ಯೆ ಮಾಡಿಕೊಂಡು ಅದಕ್ಕೆ ನೀವೇ ಕಾರಣ ಎಂದು ಬರೆದಿಡುತ್ತೇನೆ’ ಎಂದು ಹೇಳಿದ್ದಾಳೆ. ಅಲ್ಲದೇ ಆಕೆಯ ಮನೆಯವರು, ಆಕೆ ಹೇಳಿದಂತೆ ಮಾಡು ಎಂದಿದ್ದಾರೆ. 2023ರ ಮಾರ್ಚ್‌ನಲ್ಲಿ ನನ್ನ ಮನೆಗೆ ಬಂದಿದ್ದಳು ಎನ್ನುವ ರವೀಂದ್ರ ಕುಮಾರ್, ತನ್ನ ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ದೂರಿದ್ದಾರೆ.
ಜಂಘಾ ಪೊಲೀಸ್ ಠಾಣೆಯಲ್ಲಿ
ಐಪಿಸಿ ಸೆಕ್ಷನ್ 323, 452, 504 ಹಾಗೂ 506ರ ಪ್ರಕಾರ ಇವರು ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ.