ಮೆಟ್ರೋದಲ್ಲಿ ಕಿಸ್ ಮಾಡುತ್ತ ಮೈಮರೆತ ಜೋಡಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮೆಟ್ರೋ ರೈಲುಗಳು ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತವೆ. ಸದ್ಯ ಜೋಡಿಯೊಂದು ಮೆಟ್ರೋ ಕೋಚ್​​ನ ಒಳಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಆನಂದ ವಿಹಾರ ಮೆಟ್ರೋ ನಿಲ್ದಾಣದ ಆಸುಪಾಸು ಈ ಘಟನೆ ನಡೆದಿದೆ ಎನ್ನುವುದು ಮೆಟ್ರೋ ರೈಲಿನೊಳಗಿನಿಂದ ಕೇಳಿಬಂದ ಉದ್ಘೋಷಣೆಯಿಂದ ತಿಳಿದುಬರುತ್ತದೆ.

ಇನ್ನು ನೆಟ್ಟಿಗರು ಮೆಟ್ರೋ ಪ್ರಯಾಣಿಕರ ವರ್ತನೆಯ ಕುರಿತು ಮೆಟ್ರೋ ಆಡಳಿತ ಮಂಡಳಿಯು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಆದರೆ ಮುಂದೆ ಏನು ಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

@Postman_46 ಎಂಬ Xನ ಅಕೌಂಟ್ ನಿಂದ ಪೋಸ್ಟ್ ಮಾಡಲಾಗಿದೆ. ಆನಂದ ವಿಹಾರದ ಮತ್ತೊಂದು ಭಾವನಾತ್ಮಕ ವಿಡಿಯೋ. ಪ್ರೀತಿ ಕುರುಡು ಆದರೆ ಜನರು ಕುರುಡರಲ್ಲ ಎನ್ನುವುದನ್ನು ನಾವು ಮರೆತಿರಬಹುದು ಎಂದು ಬರೆದು ಪೋಸ್ಟ್ ಶೇರ್ ಮಾಡಲಾಗಿದೆ.

ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇಂಥ ಜನರಿಗಾಗಿ ದೆಹಲಿ ಮೆಟ್ರೋ ರೂಮ್ ಗಳನ್ನು ಸೃಷ್ಟಿಸಬೇಕು! ನಾಚಿಕೆಯಾಗಬೇಕು ದೆಹಲಿ ಮೆಟ್ರೋ ಆಡಳಿತಕ್ಕೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಓಯೋಗೆ ಖರ್ಚು ಮಾಡುವ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಸರ್ಕಾರವು ಈಗಲೇ ಇಂಥ ನಡೆವಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ಬೆಡ್ರೂಮ್​ ದೃಶ್ಯಗಳನ್ನು ಮೆಟ್ರೋದಲ್ಲಿಯೇ ನೋಡಬೇಕಾಗಬಹುದು ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಖುಷಿಯಾಗುತ್ತಿದೆ! ನನ್ನ ಮಹಾನ್ ಭಾರತ ಬದಲಾಗುತ್ತಿದೆ ಎಂದಿದ್ದಾರೆ.