ರಕ್ಷಿಸಿದವನ ಪ್ರಾಣಕ್ಕೆ ಕತ್ತು ತಂದ ನಾಗಪ್ಪ : ಉರಗ ಪ್ರೇಮಿ ಸಾಯುವ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೋರ್ವ ತನ್ನ ಎರಡು ಕೈಯಲ್ಲಿ ನಾಗರ ಹಾವು ಹಿಡಿದು ಸ್ನೇಹಿತನೊಂದಿಗೆ ಬೈಕ್’ನಲ್ಲಿ ಮೇಲೆ ಕುಳಿತು ಹೋಗುತ್ತಿದ್ದಾಗ ಕೈಯಲ್ಲಿದ ಹಾವು ಕಡಿದು ಕುಸಿದು ಬಿದ್ದು ಸಾವನ್ನಪ್ಪುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದಿದ್ದು, ಯುವಕ ಕುಸಿದು ಬೀಳುವ ದೃಶ್ಯ ಸದ್ಯ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.

ಮನೀಶ್ ಎಂಬ ಯುವಕನ್ನೇ ನಾಗರ ಹಾವಿನ ಕಡಿತದಿಂದ ಸಾವಿಗೀಡಾದವ. ಮನೀಶ್ ಹಾವು ಹಿಡಿಯುವುದರಲ್ಲಿ ಪರಿಣಿತ ಯುವಕ. ಹೀಗಾಗಿ ಜನನಿಬೀಡ ಪ್ರದೇಶದಲ್ಲಿ ಕಂಡು ಬಂದ ಹಾವೊಂದನ್ನು ಹಿಡಿದು ಜನ ಸಂಚಾರ ಇಲ್ಲದ ಸ್ಥಳದಲ್ಲಿ ಬಿಟ್ಟು ಬರಲೆಂದು ತನ್ನ ಸ್ನೇಹಿತನ ಜೊತೆ ಬೈಕ್ ಏರಿ ತನ್ನ ಎರಡು ಕೈಯಲ್ಲಿ ನಾಗರ ಹಾವು ಹಿಡಿದು ಹೊರಟಿದ್ದನು. ಬೈಕ್‌ ಹಿಂದೆ ಕುಳಿತು ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮನೀಶ್‌ನ ಹಾವು ಹಿಡಿದ ಕೈ ಸಡಿಲಗೊಂಡಿದೆ.

ಕೈ ಸಡಿಲಗೊಂಡ ಪರಿಣಾಮ ಹಾವು ಅವನ ಕೈಗೆ ಕಚ್ಚಿತ್ತು. ಕೂಡಲೇ ಗೆಳೆಯ ಬೈಕ್‌ ನಿಲ್ಲಿಸಿದ್ದಾನೆ. ಬೈಕ್ ನಿಲ್ಲಿಸಿದಾಗ ಮನೀಶ್‌ ಬೈಕ್‌ನಿಂದ ಕೆಳಗೆ ಇಳಿದು ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾ ಒಂದರಲ್ಲಿ ಸೆರೆಯಾಗಿದೆ. ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ಇನ್ನು ಈಗಾಗಲೇ ಈ ವಿಡಿಯೋವನ್ನು 6 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೊ ನೋಡಿ ಹಲವರು ಕಾಮೆಂಟ್‌ ಮೂಲಕ ಶಾಕ್‌ ವ್ಯಕ್ತಪಡಿಸಿದ್ದಾರೆ.