ಟಾಯ್ಲೆಟ್ ಮಾಡಿ ಪ್ಲಶ್ ಮಾಡುವ ಬೆಕ್ಕು : ತಮಾಷೆಯ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲ ಕಳೆದಂತೆ ದಿನೇ ದಿನೇ ಒಂದಲ್ಲಾ ಒಂದು ವಿನೋದಮಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ಲೇ ಇರುತ್ತವೆ.  ನಾವೂ ಪ್ರಾಣಿಗಳೆಂದು ಕರೆಯಲ್ಪಡುವ ಕೆಲವು ಪ್ರಾಣಿಗಳು ಮನುಷ್ಯರಿಗಿಂತ ಎಷ್ಟು ಬುದ್ಧಿಯನ್ನು ಪ್ರದರ್ಶಿಸುತ್ತವೆ. ಮನುಷ್ಯರಾಧ ನಾವೂ ಅವುಗಳಿಂದ ಬಹಳಷ್ಟು ಕಲಿಯಬೇಕಾಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಬೆಕ್ಕೊಂದು ಟಾಯ್ಲೆಟ್‌ಗೆ ಹೋಗಿ ಪ್ಲಶ್ ಮಾಡುವುದನ್ನು ನೋಡಬಹುದಾಗಿದೆ.

ತಿಳುವಳಿಕೆ ಇರುವ ಮನುಷ್ಯರಾದ ನಾವೂ ಕೆಲವೊಮ್ಮೆ ಟಾಯ್ಲೆಟ್‌ಗೆ (Toilet) ಹೋಗಿ ಪ್ಲಶ್ ಮಾಡದೇ ಬಂದು ಬೇರೆಯವರು ವಾಕರಿಕೆ ಮಾಡುವಂತೆ ಮಾಡುತ್ತೇವೆ. ಆದರೆ ಇಲ್ಲೊಂದು ಬೆಕ್ಕು ನಾವೂ ನಾಚಿಸುವಂತೆ ಮಲ ವಿಸರ್ಜನೆಗಾಗಿ ಟಾಯ್ಲೆಟ್‌ಗೆ ಹೋಗಿ ಟಾಯ್ಲೆಟ್‌ನಲ್ಲೇ ಕುಳಿತು ಟಾಯಲ್ಟ್ ಮಾಡುವುದಲ್ಲದೇ ನಂತರ ಪ್ಲಶ್‌ ಕೂಡ ಮಾಡುತ್ತದೆ.

ಬಹುತೇಕ ಬೆಕ್ಕುಗಳು ಸಾಮಾನ್ಯವಾಗಿ ಬೈಲು ಜಾಗದಲ್ಲಿ ಟಾಯ್ಲೆಟ್ ಮಾಡಿ, ನಂತರ ಅದನ್ನು ಮಣ್ಣಿನಿಂದ ಮುಚ್ಚುವ ಅಭ್ಯಾಸವನ್ನು ಹೊಂದಿರುತ್ತವೆ. ಆದರೆ ಕಾಲಕ್ಕೆ ತಕ್ಕಂತೆ ಇಲ್ಲೊಂದು ಬೆಕ್ಕು ಟಾಯ್ಲೆಟ್‌ಗೆ ಹೋಗಿ ಪ್ಲಶ್‌ ಕೂಡ ಮಾಡುತ್ತಿದೆ. ಹೀಗಾಗಿ ಪ್ರಾಣಿಗಳು ಕೂಡ ಎಷ್ಟು ಬುದ್ಧಿವಂತಿಕೆಯನ್ನು ಹೊಂದಿವೆ ಎಂಬುದನ್ನು ತೋರಿಸುತ್ತದೆ.

ಇದೊಂದು “ಅಕ್ಷರಸ್ಥ ಬೆಕ್ಕು” ಎಂದು ಬರೆದು ನಾಹೀದ್ ಎಂಬ ಇನ್ಸ್ಟಾಪೇಜ್‌ನಿಂದ ವಿಡಿಯೋ ಪೋಸ್ಟ್ ಆಗಿದೆ. ವೈರಲ್ ಆಗಿರೋ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಶ್ಐಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ರು ನೀವು ಟಾಯ್ಲೆಟ್‌ಗೂ ಕ್ಯಾಮರಾ ತೆಗೆದುಕೊಂಡು ಹೋಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.  ಇನ್ನೊಬ್ಬರು ಆ ಬೆಕ್ಕಿಗೂ ಸ್ವಲ್ಪ ಪ್ರೈವೆಸಿ ನೀಡಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.