ಹಸಿ ಈರುಳ್ಳಿ, ಬೆಳ್ಳುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ.? ನಿವಾರಿಸಲು ಇದನ್ನು ಸೇವಿಸಿ.

ಜನಸ್ಪಂದನ ನ್ಯೂಸ್, ಆರೋಗ್ಯ : ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದ ಬಳಿಕ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ.

ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾದರೆ ಬಾಯಿಂದ ಈ ವಾಸನೆಯನ್ನು ತೆಗೆದು ಹಾಕಲು ಯಾವ ಮನೆಮದ್ದನ್ನು ಉಪಯೋಗಿಸಿದರೆ ಒಳ್ಳೆಯದು ಅಂತ ತಿಳಿಯೋಣ ಬನ್ನಿ.

* ಬಾಯಿಂದ ಈರುಳ್ಳಿ, ಬೆಳ್ಳುಳ್ಳಿಯ ವಾಸನೆಯನ್ನು ತೆಗೆದು ಹಾಕಲು ಹಾಲು ಸಹಕಾರಿ. ಹಾಗಾಗಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸಿದ ಬಳಿಕ ಹಾಲು ಕುಡಿಯಿರಿ.

* ಬಾಯಿಂದ ಈರುಳ್ಳಿ, ಬೆಳ್ಳುಳ್ಳಿಯ ವಾಸನೆಯನ್ನು ತೆಗೆದು ಹಾಕಲು ಸೊಂಪು ಮತ್ತು ಏಲಕ್ಕಿಯನ್ನು ಜಗಿಯಿರಿ. ಇದರಿಂದ ದುರ್ವಾಸನೆ ದೂರವಾಗುತ್ತದೆ. ಇದು ಆರೋಗ್ಯಕ್ಕೂ ಕೂಡ ಉತ್ತಮ.

* ನಿಂಬೆ ಹಣ್ಣಿನಿಂದ ಈ ವಾಸನೆಯನ್ನು ನಿವಾರಿಸಬಹುದು. ಹಾಗಾಗಿ ನಿಂಬೆ ಹಣ್ಣಿನ ಪಾನಕ ತಯಾರಿಸಿ ಸ್ವಲ್ಪ ಸ್ವಲ್ಪವಾಗಿ ಸೇವಿಸಿದರೆ ಈ ವಾಸನೆ ನಿವಾರಣೆಯಾಗುತ್ತದೆ.

* ಈ ವಾಸನೆಯನ್ನು ನಿವಾರಿಸಲು ಸೇಬು ಹಣ್ಣು ಸೇವಿಸಿ. ಇದರಲ್ಲಿರುವ ಕಿಣ್ವ ಈರುಳ್ಳಿ, ಬೆಳ್ಳುಳ್ಳಿಯಲ್ಲಿರುವ ಸಲ್ವರ್ ಸಂಯುಕ್ತವನ್ನು ಒಡೆಯುತ್ತದೆ. ಇದರಿಂದ ವಾಸನೆ ನಿವಾರಣೆಯಾಗುತ್ತದೆ.