ರಾಷ್ಟ್ರೀಯ

ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಆರೋಪ ; ಪೊಲೀಸ್‌ ಅಧಿಕಾರಿಯನ್ನೇ ವಿವಸ್ತ್ರಗೊಳಿಸಿ ಥಳಿಸಿದ ಜನ.!

‌‌‌ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್‌ ಅಧಿಕಾರಿಯೊಬ್ಬರನ್ನು ಜನರು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಏಕೆ ಗೊತ್ತೇ.? ಕಾರಣ ಇಷ್ಟೆ, 20 ವರ್ಷದ ಯುವತಿಯ ಮನೆಗೆ ನುಗ್ಗಿ ಆಕೆ ಮೇಲೆ ಹಲ್ಲೆ ನಡೆಸುವಾಗ
ಜನರ ಕೈಗೆ ಈ ಪೊಲೀಸ್ ಅಧಿಕಾರಿ ಸಿಕ್ಕಿ ಬಿದ್ದಿದ್ದಾನೆ.

ಘಟನೆಯಿಂದ ರೊಚ್ಚಿಗೆದ್ದ ಜನರು ಪೊಲೀಸ್‌ ಅಧಿಕಾರಿಯನ್ನು ಜನರು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ಥಳಿಸಿದ್ದಾರೆ.

ಸಂದೀಪ್ ಕುಮಾರ್ (34) ಎಂಬ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಯುವತಿಯ ಮನೆಗೆ ನುಗ್ಗಿ ಆಕೆ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ರೆಡ್‌ ಹ್ಯಾಂಡ್‌ ಆಗಿ ಪೊಲೀಸ್‌ ನ್ನು ಹಿಡಿದು ವಿಚಾರಿಸಿದ್ದಾರೆ. ಸಿಟ್ಟಾದ ಗ್ರಾಮಸ್ಥರು ಪೊಲೀಸ್‌ ಅಧಿಕಾರಿಯನ್ನು ಹಲ್ಲೆಗೈದು ಕಂಬಕ್ಕೆ ಕಟ್ಟಿ, ವಿವಸ್ತ್ರಗೊಳಿಸಿದ್ದಾರೆ.

ಸಾರ್ವಜನಿಕರು ಘಟನೆಯ ವಿಡಿಯೋ ಮಾಡಿ ವೈರಲ್‌ ಮಾಡಿದ್ದಾರೆ, ವಿಡಿಯೋ ಆಗುತ್ತಿದ್ದಂತೆ, ಪೊಲೀಸ್ ಆಯುಕ್ತರು ತಕ್ಷಣ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ.

ಈ ಘಟನೆ ಸಂಬಂಧ ಗ್ರಾಮಸ್ಥರು ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ. ಘಟನೆ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

editor

Ghataprabha : 591 306 Tq : Gokak, Dist : Belagavi Karnataka (INDIA) Contact : 9902516740 E-mail : janaspandhannews@gmail.com

error: Content is protected !!