ನನ್ನ ಗಂಡ ಎಲ್ಲೋ ಹೋಗಿದ್ದಾನೆ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗು ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಮಕ್ಕಳ ಚೇಷ್ಟೆಗಳ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡಬಹುದು.
ಇತ್ತೀಚೆಗ ನನ್ನ ಗಂಡ ಕಾಣುತ್ತಿಲ್ಲವೇ..? ಎಂದು ಮುದ್ದಾದ ಬಾಲಕಿ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಬಾಲಕಿಯ ತಾಯಿ ಆಕೆಯ ಬಳಿ ಬಂದು ಯಾಕೆ ಅಳುತ್ತಿದ್ದಿಯಾ ಎಂದು ಕೇಳಿದ್ದಾಳೆ.
ಈಗ ನನ್ನ ಗಂಡ ಎಲ್ಲೋ ಹೋಗಿದ್ದಾನೆ.. ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಜೋರಾಗಿ ಅಳುತ್ತಾಳೆ. ಮಗುವಿನ ತಾಯಿ ಸಾಂತ್ವನ ಹೇಳಲು ಪ್ರಯತ್ನಿಸುತ್ತಾಳೆ. ಬೇಟಾ ನಿನಗೆ ಇನ್ನೂ ಗಂಡ ಸಿಕ್ಕಿಲ್ಲ. ದೊಡ್ಡವಳಾದ ಮೇಲೆ ಬರುತ್ತಾನೆ. ಅಪ್ಪ ನನ್ನ ಪತಿ. ಮಾವ ಅತ್ತೆಯ ಪತಿ ಚಿಕ್ಕ ಮಕ್ಕಳಿಗೆ ಕಿರಿಯ ಸಹೋದರಿಯರು, ಕಿರಿಯ ಸಹೋದರರು ಇರುತ್ತಾರೆ ಎಂದು ಹೇಳಿ ಸಮಾಧಾನ ಪಡಿಸಿದ್ದಾಳೆ. ಆದರೆ ಬಾಲಕಿ ಮಾತ್ರ ನನ್ನ ಪತಿ ಎಲ್ಲಿ ಹೋಗಿದ್ದಾನೆಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಮಗುವಿನ ಮಾತಿಗೆ ಅಲ್ಲಿದ್ದ ಜನರು ಸಿಕ್ಕಾಪಟ್ಟೆ ನಕ್ಕು ನಲಿದಿದ್ದಾರೆ. ಈ ವಿಚಿತ್ರ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ, ಆದರೆ ಪತಿ ಕಾಣೆಯಾಗಿದ್ದಾರೆ ಎಂದು ಈ ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.