ವಿಚಿತ್ರ ಆಚರಣೆ : ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುಂಚೆ ಲೈಂಗಿಕ ಕ್ರಿಯೆ ಕಡ್ಡಾಯವಂತೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ಅಚ್ಚರಿಯನ್ನುಂಟು ಮಾಡುತ್ತದೆ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ನಮ್ಮನ್ನು ಆಶ್ಚರ್ಯಕ್ಕೆ ದೂಡಬಹುದು.
ಅಂಥದ್ದೇ ಆಚರಣೆಯನ್ನು ಛತ್ತೀಸ್ಗಢದ ಈ ಒಂದು ಸಮುದಾಯ ಬಹಳ ಹಿಂದಿನಿಂದಲೂ ಆಚರಿಸುತ್ತಿದೆ.
ಅದೇನೆಂದರೆ ಮದುವೆಗೂ ಮುಂಚೆ ಲೈಂಗಿಕ ಕ್ರಿಯೆ ನಡೆಸುವುದು. ಹೌದು ಇದು ಒಂದು ಆಚರಣೆ ಎಂದಾದರೆ ಯಾರಾದರೂ ನಂಬುತ್ತಾರಾ? ಅದರಲ್ಲೂ ಭಾರತದಲ್ಲಿ ಇಂಥಾ ಒಂದು ಆಚರಣೆ ಇದೆ ಎಂದರೆ ಖಂಡಿತ ಯಾರೂ ಕೂಡ ನಂಬುವುದಿಲ್ಲ. ಆದರೆ, ಭಾರತದ ಈ ಒಂದು ಸಮುದಾಯದಲ್ಲಿ ಈ ಆಚರಣೆ ಇಂದಿಗೂ ಕಡ್ಡಾಯವಾಗಿದೆ.
ಮುರಿಯಾ ಬುಡಕಟ್ಟು ಜನರು ಛತ್ತೀಸ್‌ಗಢದಲ್ಲಿ ವಾಸಿಸುತ್ತಾರೆ. ಇಲ್ಲಿ ಯುವಜನರಿಗೆ ಮದುವೆಗೂ ಮುಂಚೆ ಸಂಭೋಗಕ್ಕೆ ಅವಕಾಶ ನೀಡುವ ಪದ್ಧತಿಯನ್ನು ಸಂಪ್ರದಾಯದಂತೆ ಬಹಳ ಹಿಂದಿನಿಂದಲೂ ಅನುಸರಿಸುತ್ತಾ ಬರುತ್ತಿದ್ದಾರೆ. ಈ ಸಂಪ್ರದಾಯವನ್ನು ಘೋಟುಲ್ ಎಂದು ಕರೆಯಲಾಗುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ. ಇದಕ್ಕಾಗಿ ಅವರು ದೊಡ್ಡ ಗುಡಿಸಲು ನಿರ್ಮಿಸುತ್ತಾರೆ. ಇಲ್ಲಿ ಅವರು ತಮ್ಮ ಲೈಂಗಿಕ ಅಗತ್ಯಗಳು ಮತ್ತು ಆಸೆಗಳನ್ನು ಅರಿತುಕೊಳ್ಳಲು ಅವಕಾಶ ನೀಡುತ್ತಾರೆ.
ಈ ಸಂಪ್ರದಾಯವನ್ನು ಇಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ವಯಸ್ಕ ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ನೃತ್ಯ ಮತ್ತು ಹಾಡುವ ಮೂಲಕ ಸಂಪ್ರದಾಯವನ್ನು ಆಚರಿಸುತ್ತಾರೆ. ಆಬಳಿಕ ಅವರು ಬಿದಿರಿನ ಗುಡಿಸಲೊಳಗೆ ತೆರಳಿ ತಮ್ಮ ಆಯ್ಕೆಯ ಜನರೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗುತ್ತಾರ.
ಹೀಗೆ ಅವರು ಏಳು ದಿನ ಈ ಸಂಪ್ರದಾಯವನ್ನು ಆಚರಿಸುತ್ತಾರೆ. ಆಚರಣೆ ಅಂತ್ಯಕ್ಕೂ ಮೊದಲು ತಮ್ಮಿಷ್ಟದ ಜೋಡಿಯನ್ನು ನಿರ್ಧರಿಸಬಹುದು. ಸಂಬಂಧಪಟ್ಟ ಪುರುಷನು ಮಹಿಳೆಯ ತಲೆಯ ಮೇಲೆ ಹೂವನ್ನು ಇಟ್ಟು ಮದುವೆಯಾಗುವ ಉದ್ದೇಶವನ್ನು ಘೋಷಿಸಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.