ಸುದ್ದಿ

ನನ್‌ ಕೈಯಿಂದಾನೇ ಕಿತ್ಕೊಂಡ್‌ ತಿಂತಿಯಾ.? ಎಷ್ಟ ಸೊಕ್ಕು ನಿಂಗೆ ; ನಗು ತರಿಸುತ್ತೆ ಕೋಳಿಗೆ ಹೆದರಿಸುವ ಮಂಗನ ಮರಿ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಕೆಲವೊಂದು ವಿಡಿಯೋಗಳು ನಮ್ಮ ಮನಸ್ಸಿಗೆ ಸಾಕಷ್ಟು ಖುಷಿ ನೀಡುತ್ತವೆ. ಅದರಲ್ಲೂ ಪ್ರಾಣಿ, ಪಕ್ಷಿಗಳ ವಿಡಿಯೋಗಳನ್ನು ಇಷ್ಟಪಡವರು ಕಡಿಮೆ ಅಂತಲೇ ಹೇಳಬಹುದು.

ಇದೀಗ “ನೇಚರ್‌ ಈಸ್‌ ಅಮೇಜಿಂಗ್‌” ಎಂಬ ಟ್ವಿಟರ್‌ ಪುಟದಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋ ನೋಡಿದ್ರೆ ನೀವು ನಗದೇ ಇರಲು ಸಾಧ್ಯವಿಲ್ಲ.

ಕೋಳಿ ಹುಂಜ ಹಾಗೂ ಮಂಗನ ನಡುವೆ ನಡೆಯುವ ಪ್ರಸಂಗವಿದು :

ವೈರಲ್ ಆಗಿರೋ ವಿಡಿಯೋದಲ್ಲಿ ಏನಿದೆ ಅಂದರೆ, ಕುರ್ಚಿಯ ಮೇಲೆ ಕುಳಿತ ಮಂಗವೊಂದು ತನ್ನೆದುರಿನ ಊಟದ ತಟ್ಟೆಯಿಂದ ಅನ್ನದ ಮುದ್ದೆಯನ್ನು ತಿನ್ನುತ್ತಿರುತ್ತದೆ.

ಅದರ ಎದುರು ಕೋಳಿ ಹುಂಜವೊಂದು ನಿಂತಿದ್ದು, ಅದು ಮಂಗನ ಕೈಯಿಂದ ಊಟವನ್ನು ಕಿತ್ತುಕೊಂಡು ತಿನ್ನುತ್ತದೆ. ಆಗ ಕೆಲ ಕಾಲ ಸುಮ್ಮನಿದ್ದ ಮಂಗನ ಮರಿ ಒಂದೇ ಸಲಕ್ಕೆ ರೊಚ್ಚಿಗೆದ್ದು ಬಿಡುತ್ತೆ. ಒಮ್ಮೆ ಕೋಪದಿಂದ ಕೋಳಿಗೆ ಗದರಿಸುತ್ತೆ, ಮಾತ್ರವಲ್ಲ ನನ್ನ ಕೈಯಿಂದಾನೇ ಅನ್ನ ಕಸಿತಿಯಾ, ಇರು ನಿಂಗೆ ಎನ್ನುತ್ತಾ ಕೋಳಿಯ ಕೊಕ್ಕಿಗೆ ಬಾಯಿ ಹಾಕುತ್ತದೆ.

ಅಲ್ಲದೇ, ನೋಡು ನೋಡು ಎಂದು ತೋರಿಸಿ ತೋರಿಸಿ ತಿನ್ನುತ್ತದೆ. ಮಂಗ ಕೋಳಿಯನ್ನು ಹಂಗಿಸುವ ರೀತಿಯಂತೂ ʼಅಯ್ಯೋ, ಇದೆಷ್ಟು ಮುದ್ದಾಗಿದೆʼ ಎಂದು ನಿಮಗೆ ಅನ್ನಿಸದೇ ಇರುವುದಿಲ್ಲ. ಅಲ್ಲದೆ ಮಂಗ ಗದರಿಸುವ ರೀತಿಗಂತೂ ನೀವು ಬಿದ್ದು ಬಿದ್ದು ನಗೋದು ಪಕ್ಕಾ.

editor

Ghataprabha : 591 306 Tq : Gokak, Dist : Belagavi Karnataka (INDIA) Contact : 9902516740 E-mail : janaspandhannews@gmail.com

error: Content is protected !!