ಪರಸ್ಪರ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಪೊಲೀಸ್ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸರಿಬ್ಬರು ನಡು ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜನರ ರಕ್ಷಣೆಯಲ್ಲಿ ತೊಡಗಿ, ಅಪರಾಧವನ್ನು ತಡೆಯಬೇಕಾಗಿರುವ ಪೊಲೀಸರೇ ಹಾಡಹಗಲೇ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅವರಿಬ್ಬರು ಡಯಲ್ 112 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ ನಡೆದಿದೆ.
ಸೊಹ್ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಹಾಲ್ಟ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಇಬ್ಬರು ಪರಸ್ಪರರನ್ನು ಬೈದುಕೊಳ್ಳುತ್ತ, ಒಬ್ಬರು ಮತ್ತೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಗಲಾಟೆಯ ವೇಳೆ ಒಬ್ಬ ಪೊಲೀಸ್ ಜೀಪ್ ನಿಂದ ಲಾಠಿ ತೆಗೆದು ಮತ್ತೊಬ್ಬ ಪೊಲೀಸ್ ಮೇಲೆ ಹಲ್ಲೆಗೈದಿದ್ದಾರೆ.
ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರೇ ಜಗಳ ಬಿಡಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈ ಘಟನೆಗೆ ಕಾರಣವೇನೆಂದು ಇದುವರೆಗೆ ತಿಳಿದು ಬಂದಿಲ್ಲ.
ಸದ್ಯ ವೈರಲ್ ವಿಡಿಯೋವನ್ನು ಇಲಾಖೆ ಪರಿಶೀಲನೆ ಮಾಡಿದ್ದು, ಇಬ್ಬರು ಪೊಲೀಸರ ತನಿಖೆಯನ್ನು ಇಲಾಖೆ ಆರಂಭಿಸಿದೆ. ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಇಲಾಖೆ ಹೇಳಿದೆ.
बिहार में शराब बंद है pic.twitter.com/If3tEpUIpU
— Piyush Rai (@Benarasiyaa) September 18, 2023