‘ಗೃಹಲಕ್ಷ್ಮಿ’ ಹಣ ಬರಲಿಲ್ಲ ಅಂತ ಯೋಚಿಸ್ತಿದ್ದಿರಾ.? ಈ ದಿನಾಂಕದಂದು ಒಟ್ಟಿಗೆ ಜಮಾ ಆಗುತ್ತೆ 4 ಸಾವಿರ..!
ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳೊಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದುವರೆಗೆ ಬರೋಬ್ಬರಿ 1.14 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇದರಲ್ಲಿ 8 ರಿಂದ 9 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ.
ಯೋಚಿಸಬೇಡಿ, ನಮಗೆ ಇನ್ನು ಸರಕಾರದ (ಗೃಹಲಕ್ಷ್ಮಿ) ಹಣ ಬರಲಿಲ್ಲ ಎಂದು ಯಾವ ಮಹಿಳೆಯು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ, ಇನ್ನು ಮುಂದೆ ಒಂದು ತಿಂಗಳ ಬಾಕಿ ಹಣ ಇದ್ದರೂ ಸಹ ಮುಂದಿನ ತಿಂಗಳು ಒಂದೇ ಬಾರಿಗೆ ಬಾಕಿ ತಿಂಗಳು ಸೇರಿ 2 ತಿಂಗಳ ಹಣ ಫಲಾನುಭವಿಗಳಿಗೆ ಜಮಾ ಆಗಲಿದೆ.
ಇನ್ನು ಮುಂದೆ ಪ್ರತಿ ತಿಂಗಳು 15 ನೇ ತಾರೀಖಿಗೆ ‘ಗೃಹಲಕ್ಷ್ಮಿ’ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಹಣದ ವರ್ಗಾವಣೆಗೆ ಇಂತಷ್ಟು ಲಿಮಿಟ್ ಇರುವುದರಿಂದ ಮೊದಲನೇ ಕಂತಿನ ಹಣ ತಲುಪಿಸುವುದು ತಡವಾಗುತ್ತಿದೆ ಎಂದು ಹೇಳಲಾಗಿದೆ.
ಇದೇ ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ಗೃಹಲಕ್ಷ್ಮಿ ಹಣವನ್ನು ಪಡೆಯಲಿದ್ದಾರೆ. ಹಾಗೆಯೇ ಮಹಿಳೆಯರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ಸರಿಪಡಿಸಿಕೊಳ್ಳಬೇಕು.
ಸನ್ 2023 – 24 ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ 17,500 ಕೋಟಿ ರೂ. ನಿಗದಿ ಮಾಡಲಾಗಿದ್ದು, ಮೊದಲ ಕಂತು 4,375 ಕೋಟಿ ರೂ. ಬಿಡುಗಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಯೋಜನೆಗೆ ಸಂಬಂಧಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಷರತ್ತು ವಿಧಿಸಿ ಮೊದಲ ಕಂತಿನ ಅನುದಾನ 4,600 ಕೋಟಿ ರೂ. ಬಿಡುಗಡೆಗೆ ಆದೇಶಿಸಲಾಗಿದೆ.