ನಡುರಸ್ತೆಯಲ್ಲೇ ಪತ್ನಿಯ ಭೀಕರ ಹತ್ಯೆ ಮಾಡಿದ ಪತಿ.!
ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಪತಿಯೋರ್ವ, ಪತ್ನಿಯನ್ನು ನಡು ರಸ್ತೆಯಲ್ಲೇ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಅಲಕಾಪುರ ಕ್ರಾಸ್‌ನಲ್ಲಿ ಮಾಡಿದ್ದಾನೆ.
ಹತ್ಯೆಯಾದ ದುರ್ದೈವಿಯನ್ನು ಹಿಂದೂಪುರ ಮೂಲದ ಶಾನವಾಜ್ (28) ಎಂದು ಗೊತ್ತಾಗಿದೆ.
ಅಲಕಾಪುರ ಗ್ರಾಮದ ಅಂಜುಮನ್ ಖಾನ್ (30) ಎಂಬಾತ ಚಾಕುವಿನಿಂದ ಶಾನವಾಜ್‌ಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ತಾಲೂಕಿನ ಅಲಕಾಪುರ ಕ್ರಾಸ್ ಎಸ್.ಡಿ.ಎಂ ವೈನರಿ ಕಾರ್ಖಾನೆ ಬಳಿ ಘಟನೆ ನಡೆದಿದ್ದು, ಹತ್ಯೆ ಮಾಡಿದ ನಂತರ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಪೊಲೀಸ್ ತನಿಖೆಯಲ್ಲಿ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆಯ ಪೊಲೀಸರು ಭೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.