ವರ್ಕ್‌ಔಟ್ ಮಾಡುವಾಗಲೇ ಹೃದಯಾಘಾತ ; ಆಘಾತಕಾರಿ ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಫಿಟ್ ಆಗಿರಬೇಕು, ಆರೋಗ್ಯವಾಗಿರಬೇಕು ಅಂತ ಜಿಮ್ ಹೋಗುವ ಜನರಿಗೆ ಅದೇನಾಗುತ್ತಿದೆಯೋ ತಿಳಿಯುತ್ತಿಲ್ಲ. ಜಿಮ್ ಸೆಂಟರ್‌ಗಳಲ್ಲೇ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಸದ್ಯ ಇಂತಹದ್ದೆ ಇನ್ನೊಂದು ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಟ್ರೆಡ್‌ಮಿಲ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವಾಗಲೇ 21 ವರ್ಷದ ಯುವಕ ಸಿದ್ಧಾರ್ಥ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಈತ ನೋಯ್ಡಾ ಇಂಜಿನಿಯರಿಂಗ್ ಕಾಲೇಜ್‌ನ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದು, ಸರಸ್ವತಿ ವಿಹಾರದ ನಿವಾಸಿ ಎಂದು ವರದಿಯಾಗಿದೆ.
ಖೋಡಾ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಯುವ 10 ನಿಮಿಷದ ಮುಂಚೆ ತಾಯಿಗೆ ಕರೆ ಮಾಡಿ ಮಾತನಾಡಿದ್ದ ಎಂದು ಆತನ ಜೊತೆ ಇದ್ದ ಸಹಪಾಠಿಗಳು ತಿಳಿಸಿದ್ದಾರೆ.
ಸಿದ್ಧಾರ್ಥ ಟ್ರೆಡ್‌ಮಿಲ್ ಮೇಲೆ ಬಿದ್ದ ತಕ್ಷಣ ಆತನನ್ನ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಯುವಕ ಸಾನವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.