ಹೃದಯಾಘಾತದಿಂದ ಗುಪ್ತಚರ ಇಲಾಖೆಯ ಎಎಸ್ಐ ಸಾವು.!
ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ಮಂಗಳೂರಿನ ಉರ್ವ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗುಪ್ತಚರ ಇಲಾಖೆಯ ಎಎಸ್ಐ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತರು ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು (45) ಎಂದು ವರದಿಯಾಗಿದೆ.
ರಾಜ್ಯ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಕುಸಿದುಬಿದ್ದಿದ್ದಾರೆ.
1993 ನೇ ಬ್ಯಾಚ್ ನವರಾಗಿರುವ ರಾಜೇಶ್, ಇನ್ನೂ ಏಳು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಇವರು ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿಯೂ ಆಗಿದ್ದರು.