ರಾಜ್ಯ

ರೆಡ್​​​ಹ್ಯಾಂಡ್​​​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ.!

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಢಾಬಾವೊಂದರಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದವರಿಗೆ ಬಿಲ್‌ ಪಾವತಿಸಲು 1.50 ಲಕ್ಷ ರೂ. ಪಡೆದ ಆರೋಪದ ಮೇಲೆ ರೋಣ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಬಸಮ್ಮ ಹೂಲಿ ಮತ್ತು ಸಿಬ್ಬಂದಿ ಜಗದೀಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ಅನಿಲ್‌ ಕುಮಾರ್‌ ದಡ್ಡಿ ಎಂಬುವವರು ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದ್ದರು. ಇವರಿಗೆ 42 ಲಕ್ಷ ರೂ. ಬಿಲ್‌ ಪಾವತಿಸಲು ಸಿಡಿಪಿಒ ಬಸಮ್ಮ ಹೂಲಿ 1.60 ಲಕ್ಷ ರೂ. (ಶೇ. 4)ರಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಆ ಹಣವನ್ನು ಸಿಬ್ಬಂದಿ ಜಗದೀಶ್‌ ಬಳಿ ನೀಡಲು ಸೂಚಿಸಿದ್ದರು.

ಅನಿಲ್‌ ಕುಮಾರ ಅವರು ಶನಿವಾರ ಗಜೇಂದ್ರಗಡದ ಬಳಿಯಿರುವ ಡಾಬಾದ‌ಲ್ಲಿ ಜಗದೀಶ್‌ಗೆ 1.50 ಲಕ್ಷ ರೂ. ನೀಡುತ್ತಿರುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಗದಗ ಲೋಕಾಯುಕ್ತ ಡಿವೈಎಸ್‌ಪಿ ಶಂಕರ ರಾಗಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಿಪಿಐ ರವಿ ಪುರುಷೋತ್ತಮ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು..

editor

Ghataprabha : 591 306 Tq : Gokak, Dist : Belagavi Karnataka (INDIA) Contact : 9902516740 E-mail : janaspandhannews@gmail.com

error: Content is protected !!