ಹೆಲಿಕಾಪ್ಟರ್ ಶಾಟ್ ಹೊಡೆಯುವ ನಾಯಿ ; ಅದ್ಬುತ ವಿಡಿಯೋ ವೈರಲ್..!

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರುತ್ತೀರಿ. ಆ ಮುದ್ದಾದ ಪ್ರಾಣಿಗಳ ವಿಡಿಯೋಗಳು ಬೇಸರಗೊಂಡ ಮನಸ್ಸುಗಳಿಗೆ ಮುದ ನೀಡುತ್ತವೆ.

ಶ್ವಾನಗಳ ಜೊತೆಯಲ್ಲೇ ಆಟವಾಡುತ್ತಾ ಮಕ್ಕಳು ಬ್ಯಾಟ್ ಬೀಸಿದರೆ ದೂರ ಚಿಮ್ಮಿದ ಬಾಲ್ ತರಲು ಓಡುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಶ್ವಾನ ತಾನೇ ಬ್ಯಾಟಿಂಗ್‌ಗೆ ನಿಂತಿದೆ.

ಬಾಯಲ್ಲಿ ಬ್ಯಾಟ್ ಹಿಡಿದು ಇದು ಶ್ವಾನ ಹೊಡೆಯುವ ಹೆಲಿಕಾಪ್ಟರ್‌ ಶಾಟ್‌ಗೆ (helicopter shot) ನೆಟ್ಟಿಗರು ಫಿದಾ ಆಗಿರುವುದಲ್ಲೇ, ಹಲವು ಕ್ರಿಕೆಟಿಗರ ನೆನಪು ಮಾಡುತ್ತಿದೆ ಈ ಶ್ವಾನ…..

ಮಾಲೀಕ ಬೌಲಿಂಗ್ ಮಾಡ್ತಿದ್ರೆ ಒಂದು ಬಾಲ್ ಕೂಡ ಮಿಸ್ ಮಾಡದೇ ಸಖತ್ ಆಗಿ ಬ್ಯಾಟಿಂಗ್ ಮಾಡುತ್ತಿದೆ ಈ ಶ್ವಾನ.

ಹಳೆ  ವಿಡಿಯೋ ಇದಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ಶ್ವಾನವನ್ನು ಭಾರತ ಕ್ರಿಕೆಟ್ ಟೀಂಗೆ (India Cricket Team) ಸೇರಿಸುವಂತೆ ಮನವಿ ಮಾಡಿದ್ದಾರೆ.

ಮತ್ತೆ ಕೆಲವರು ಇಲ್ಲಿ ಪಾಕಿಸ್ತಾನವನ್ನು ಅಣಕಿಸಿದ್ದು, ವಾಹ್ ಎಂಥಾ ಶಾಟ್ ಇದು, ಈ ನಾಯಿಯಂತೆ ಪಾಕಿಸ್ತಾನದವರಿಗೂ ಆಡಲಾಗದು ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಇದು ಭಾರತದ ಜ್ಯೂನಿಯರ್ ವಿರಾಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಪ್ರಿಯರಿಗೆ ಈ ಶ್ವಾನದ ವಿಡಿಯೋ ರಸದೌತಣ ನೀಡಿದೆ.