ವಿಶೇಷ ಸುದ್ದಿ

ಆಮೆಗೆ ಮುತ್ತಿಕ್ಕುವ ಚಿಟ್ಟೆಗಳ ಹಿಂಡು : ವಿಸ್ಮಯಕಾರಿ ವೀಡಿಯೋ ವೈರಲ್..!

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಸರ್ಗ ಅನೇಕ ವಿಸ್ಮಯಕಾರಿ ಅಂಶಗಳನ್ನು ಹೊಂದಿದೆ. ಅದು ತನ್ನ ನಿಗೂಢವನ್ನು ಎಂದು ಬಿಟ್ಟು ಕೊಡೊದಿಲ್ಲ.

ಸಹಬಾಳ್ವೆಯಿಂದ ಬಾಳುವುದನ್ನು ಈ ಪ್ರಕೃತಿ ಕಲಿಸಿದೆ, ಮನುಷ್ಯರ ಹೊರತಾಗಿ ಪ್ರಾಣಿಗಳೆಲ್ಲವೂ ಒಂದಕ್ಕೊಂಡು ಹೊಂದಿಕೊಂಡು ಈ ಪ್ರಪಂಚದಲ್ಲಿ ಬದುಕುತ್ತವೆ.

ಪ್ರಕೃತಿಯ ಈ ಆಹಾರ ಸರಪಣಿಯಲ್ಲಿ ಎಲ್ಲವೂ ಅಗತ್ಯ, ಎಲ್ಲವೂ ಅಮೂಲ್ಯ ಎಂಬುದು ಹಲವು ಬಾರಿ ಸಾಬೀತಾಗಿದೆ.

ಚಿಟ್ಟೆಗಳು (butterflies) ಈ ಪ್ರಕೃತಿಯ ಅವಿಭಾಜ್ಯ ಅಂಗಗಳು, ಹೂವಿಂದ ಹೂವಿಗೆ ಹಾರಿ ಮಕರಂದ ಹೀರುವ ಇವುಗಳು ಪ್ರಕೃತಿಯ ಹೂವುಗಳ ಸಂತಾನೋತ್ಪತಿ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸಾಮಾನ್ಯವಾಗಿ ಈ ಚೆಟ್ಟೆಗಳನ್ನು ನೀವು ಹೂಗಳಿದ್ದಲ್ಲಿ ಸಾಕಷ್ಟು ನೋಡಿರುತ್ತೀರಿ ಹೂವು ಮರಗಿಡಗಳ ಚಿಗುರುಗಳಲ್ಲಿ ಮಕರಂದ ಹೀರುವ ಈ ಪುಟ್ಟ ಕೀಟಗಳು ಮನುಷ್ಯರು ಪ್ರಾಣಿಗಳ ಹಿಂದೆ ಹೋಗುವುದನ್ನು ನೀವು ನೋಡಿರಲು ಸಾಧ್ಯವಿಲ್ಲ.

ಆದರೂ ಇಲ್ಲಿ ವಿಸ್ಮಯ (Nature wonder) ಎಂಬಂತೆ ಆಮೆಯೊಂದನ್ನು ಚಿಟ್ಟೆಗಳ ಹಿಂಡೊಂದು ಬೆನ್ನಟ್ಟಿ ಸುಮ್ಮನಿರಲು ಬಿಡದೇ ಕಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

editor

Ghataprabha : 591 306 Tq : Gokak, Dist : Belagavi Karnataka (INDIA) Contact : 9902516740 E-mail : janaspandhannews@gmail.com

error: Content is protected !!