ಧಗಧಗನೆ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಚಾಲಕನನ್ನು ರಕ್ಷಿಸಿದ ಪೊಲೀಸ್ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾರೊಂದು ಧಗಧಗನೆ ಹೊತ್ತಿ ಉರಿಯುತ್ತಿರುವಾಗ ಏಕಾಂಗಿಯಾಗಿ ಪೊಲೀಸನೊಬ್ಬ ಕಾರಿನ ಚಾಲಕನನ್ನು ರಕ್ಷಿಸಿದ ಸಾಹಸಮಯ ಕ್ಷಣದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ಅಮೆರಿಕದಲ್ಲಿ ನಡೆದ ಘಟನೆಯೊಂದರಲ್ಲಿ ಉರಿಯುತ್ತಿದ್ದ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುವ ಮೊದಲೇ ಪೊಲೀಸನೊಬ್ಬ ಕಾರಿನ ಚಾಲಕನನ್ನು ರಕ್ಷಿಸಿದ ಸಾಹಸದ ಕ್ಷಣ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ದೃಶ್ಯವನ್ನು ಡ್ಯಾಶ್‌ಕ್ಯಾಮ್ನಲ್ಲಿ ಸೆರೆಯಾಗಿದ್ದು, “ಮಡಿಲ್ ಪೊಲೀಸ್ ಇಲಾಖೆ” ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.

ಈ ಘಟನೆಯು “ಸೆಪ್ಟೆಂಬರ್ 9, 2023 ರಂದು ಶನಿವಾರ ಮುಂಜಾನೆ” ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ಜೆಂಟ್ ಜೆಟಿ ಮೂರ್ ಅವರು ಏಕಾಂಗಿಯಾಗಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಹೊತ್ತಿ ಉರಿಯುತ್ತಿರುವ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನ ಪ್ರಾಣವನ್ನು ಉಳಿಸಿದ್ದಾರೆ. ಕಾರು ರಸ್ತೆ ಬಿಟ್ಟು ಪೊದೆಗೆ ಹೋಗಿದೆ. ಹಾಗೂ ಪೊಲೀಸ್ ಇಲಾಖೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಾರ್ಜೆಂಟ್ ಮೂರ್ ಬೆಂಕಿ ನಂದಿಸುವ ಸಾಧನದೊಂದಿಗೆ ಕಾರಿನ ಕಡೆಗೆ ಓಡಿಹೋಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಧಗಧಗಿಸುತ್ತಿರುವ ಕಾರಿನೊಳಗೆ ಚಾಲಕ ಇನ್ನೂ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಉರಿಯುತ್ತಿರುವ ಬೆಂಕಿಯಲ್ಲೇ ಮುನ್ನುಗ್ಗಿದ ಅವರು ಒಳಗಿದ್ದ ಚಾಲಕನನ್ನು ಎಳೆದು ಹೊರ ತೆಗೆದಿದ್ದಾರೆ.

ಅವರ ಸಾಹಸಕ್ಕೆಸಾರ್ಜೆಂಟ್ ಜೆಟಿ ಮೂರ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳುವುದು ಕಡಿಮೆಯಾಗುತ್ತದೆಎಂದು ಪೊಲೀಸ್ ಇಲಾಖೆ ಫೇಸ್‌ಬುಕ್‌ನಲ್ಲಿ ಹೇಳಿದೆ.