ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ದಿನೇ ದಿನೇ ತರಹ ತರಹದ ವಿಷಯಗಳು ವೈರಲ್ ಆಗುತ್ತಲೇ ಇರುತವೇ.
ಇದೀಗ ಓರ್ವ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಮೇಲಾಧಿಕಾರಿಗಳಿಗೆ ಬರೆದ ಪತ್ರ ಒಂದು ವೈರಲ್ ಆಗುತ್ತಿದೆ.
ಈ ವೈರಲ್ ಆಗುತ್ತಿರುವ ಪತ್ರದಲ್ಲಿ, ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಫರೂಕಾಬಾದ್‌ನ ಪೋಲೀಸ್ ಒಬ್ಬರು ತಾನು ಮದುವೆಯಾಗಲು ರಜೆ ನೀಡುವಂತೆ ತನ್ನ ಮೇಲಧಿಕಾರಿಗಳಿಗೆ ಮನಃಪೂರ್ವಕ ಮನವಿ ಮಾಡಿದ್ದಾರೆ.
ಕಾನ್‌ಸ್ಟೇಬಲ್ ರಾಘವ್ ಚತುರ್ವೇದಿ ಎಂಬುವರು ರಜೆಗಾಗಿ ಪತ್ರ ಬರೆದು ವಿನಂತಿಸಿದ್ದಾರೆ.
ಕಾನ್‌ಸ್ಟೇಬಲ್ ಬರೆದ ಅರ್ಜಿ :
“ಹೆಚ್ಚು ಹುಡುಕಾಟದ ನಂತರ ಒಳ್ಳೆಯ ಸಂಬಂಧ ಬಂದಿದೆ. ನನಗೆ ಮದುವೆಯಾಗಲು ವಯಸ್ಸಾಗುತ್ತಿದೆ. ನಾನು ಮದುವೆಯಾಗಬೇಕು. ನಾನು ಹುಡುಗಿಯನ್ನು ನೋಡಲು ಹೋಗಬೇಕು. ಇಂತಹ ಪರಿಸ್ಥಿತಿಯಲ್ಲಿ ದಯವಿಟ್ಟು ಐದು ದಿನಗಳ ರಜೆ ನೀಡಿ” ಎಂದು ಪತ್ರ ಬರೆದಿದ್ದಾರೆ.
ಈ ಹಾಸ್ಯಮಯ ಮತ್ತು ಸ್ಪಷ್ಟವಾದ ಪತ್ರವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಸದ್ಯ ಅವರ ರಜೆಗೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.