ದೈತ್ಯಹುಲಿಗೆ ಚುಂಬಿಸುತ್ತಿರುವ ವ್ಯಕ್ತಿ : ಅದೃಷ್ಟವಂತ ಎಂದ ನೆಟ್ಟಿಗರು ; ಆಶ್ಚರ್ಯಕರ ವಿಡಿಯೋ ವೈರಲ್..!

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಾಣಿ ಪ್ರಿಯರಿಗೆ ಮಾತ್ರ ಗೊತ್ತು, ಪ್ರಾಣಿಗಳ ಪ್ರೀತಿ ಎಷ್ಟೊಂದು ಅಗಾಧವಾದದೆಂದು. ನೀವೂ ಯಾವುದೇ ಪ್ರಾಣಿಗಳನ್ನು ಅವು ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದ್ದೊಯ್ಯುತ್ತವೆ.

ಪ್ರಾಣಿಗಳೊಂದಿಗೆ ಆಟವಾಡುತ್ತಾ, ಅವುಗಳ ಮೈಸವರುತ್ತ ಮುದ್ದಿಸಿದರೆ ಪ್ರಾಣಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು. ಸಾಮಾನ್ಯವಾಗಿ ನಾವೂ ಎತ್ತು, ಹಸು, ಬೆಕ್ಕು, ನಾಯಿ ಮುಂತಾದ ಸಾಕುಪ್ರಾಣಿಗಳಿಗೆ ಮುದ್ದಿನಿಂದ ಅಪ್ಪಿಕೊಳ್ಳುತ್ತೇವೆ ಇಲ್ಲಾ ಮುತ್ತು ಕೊಟ್ಟಂತೆ ಮಾಡುತ್ತೇವೆ.

ಆದರೆ ವೈರಲ್ ಆಗಿರೋ ಈ ವಿಡಿಯೋ ನೋಡಿ,  ವ್ಯಕ್ತಿಯೋರ್ವ ಹುಲಿಗೆ ಆಟವಾಡಿಸುತ್ತ ಅದರ ಬಾಯಿಗೆ ಬಾಯಿ ಕೊಟ್ಟು ಚುಂಬಿಸಿದ್ದಾನೆ. ವನ್ಯಪ್ರಾಣಿಗಳಿಗೆ  ಹೀಗೆ ನೇರಾನೇರ ಚುಂಬಿಸುವುದನ್ನು ನೀವೂ ಎಲ್ಲೂ ನೋಡಿರಲೂ ಸಾಧ್ಯವೇ ಇಲ್ಲಾ. ಈ ವ್ಯಕ್ತಿ ಈ ದೈತ್ಯ ಹುಲಿಯನ್ನು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ನಾಲ್ಕು ದಿನಗಳ ಹಿಂದೆ tigers._.lions ಎಂಬ ಇನ್​ಸ್ಟಾಗ್ರಾಂನಲ್ಲಿ (Instagram) ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋಗೆ ಇಲ್ಲಿಯವರೆಗೆ 1,36,000 1,36,000 likes. ಮತ್ತು 760 comments ಬಂದಿವೆ.

ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಂದ ಹಾಗೇ ನೀವೇನಂತೀರಿ?

ಕೆಲವರಂತೂ ಈತ ಬಾರೀ ಅದೃಷ್ಟವಂತ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಪ್ರಾಣಿಯೊಂದಿಗೆ ಈತ ಹೀಗೆ ಆಟವಾಡುತ್ತಿರುವುದನ್ನು ನೋಡಲು ಸಂತೋಷವೆನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಆ ಹುಲಿ ಕೆಟ್ಟ ಮೂಡ್​ಗೆ ತಿರುಗುವತನಕ ಅವನು ಹೀಗೆ ಆಟವಾಡುತ್ತಾನೆ ಚುಂಬಿಸುತ್ತಾನೆ, ಮುಂದೆ? ಎಂದು ಕೇಳಿದ್ದಾರೆ ಇನ್ನೊಬ್ಬರು.

ನನಗೂ ಹೀಗೊಂದು ಅವಕಾಶ ಸಿಗಬಾರದೆ? ಎಂದು ಕೇಳಿದ್ದಾರೆ ಒಬ್ಬರು. ಹಾಗೇಯೇ ಯಾಕೆ ಬದುಕುವ ಆಸೆ ಇಲ್ಲವೆ? ಎಂದಿದ್ಧಾರೆ ಇನ್ನೊಬ್ಬರು. ನಿಜಕ್ಕೂ ಈ ಹುಲಿ ತುಂಬಾ ಸುಂದರವಾಗಿದೆ, ಅಂದರೆ ಅವನು ಅದನ್ನುಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ.