ಆರೋಗ್ಯಕ್ಕೂ ಒಳ್ಳೆಯದು, ಸೌಂದರ್ಯಕ್ಕೂ ಒಳ್ಳೆಯದು ಈ ಬೀಟ್‌ರೂಟ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬೀಟ್‌ರೂಟ್ ನಲ್ಲಿ ಮಣ್ಣಿನ ಅಡಿಯಲ್ಲಿ ಸಿಗುವ ಕೆಲ ತರಕಾರಿಗಳಲ್ಲಿ ಇತರೆ ತರಕಾರಿಗಳಿಗಿಂತಲೂ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಆರೋಗ್ಯವಂತ ತರಕಾರಿಗಳಲ್ಲಿ ಬೀಟ್‌ರೂಟ್ ಕೂಡಾ ಒಂದು.

ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ನಮ್ಮ ಅಡುಗೆ ಪದಾರ್ಥದಲ್ಲಿ ನಿಯಮಿತವಾಗಿ ಬಳಸಿಕೊಂಡರೆ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬೀಟ್‌ರೂಟ್ ಉಪಕಾರಿಯಾಗಿದೆ.

ಬೀಟ್‌ರೂಟ್ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ನಮ್ಮ ದೇಹವನ್ನು ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು.

ಇದು ನೈಸರ್ಗಿಕ ಸಕ್ಕರೆಯ ಸಮೃದ್ಧ ಮೂಲವಾಗಿದ್ದು, ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಲು ಕೆಲಸ ಮಾಡುತ್ತದೆ.

ಆಗಾಗ ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಹೊಂದಿರುವ ಜನರು ಬೀಟ್‌ರೂಟ್ ತಿನ್ನಬೇಕು. ಏಕೆಂದರೆ ಇದರಲ್ಲಿರುವ ಫೈಬರ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಖಕ್ಕೆ ಅದ್ಭುತವಾದ ಹೊಳಪನ್ನು ನೀಡುತ್ತದೆ.

ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.

ನಿಮಗೆ ಅಧಿಕ ರಕ್ತದೊತ್ತಡವಿದ್ದರೆ, ಬೀಟ್‌ರೂಟ್ ಸಲಾಡ್ ಅಥವಾ ಜ್ಯೂಸ್ ಸೇವಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಬಿಪಿ ನಿಯಂತ್ರಣವಾಗುತ್ತದೆ.

ಆಗಾಗ ಆಯಾಸ ಅಥವಾ ದೌರ್ಬಲ್ಯ ಹೊಂದಿರುವವರಿಗೆ ಬೀಟ್‌ರೂಟ್ ಪ್ಯಾನೇಸಿಯಕ್ಕಿಂತ ಕಡಿಮೆಯಿಲ್ಲ.

ಬೀಟ್‌ರೂಟ್ ತಿನ್ನುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.

ಬೀಟ್‌ರೂಟ್‌ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ಸಹಾಯಕ ಎನ್ನಲಾಗುತ್ತದೆ. ಬೀಟ್‌ರೂಟ್ ನಿಯಮಿತ ಸೇವನೆಯಿಂದ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು. ಬೀಟ್‌ರೂಟ್ ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳು ಉತ್ಪತ್ತಿಯಾಗದಂತೆ ಬೀಟಾಸಯಾನಿನ್ ತಡೆಯುತ್ತದೆ.

ಬೀಟ್‌ರೂಟ್ ಸಿಪ್ಪೆಗಳನ್ನು ಮಿಕ್ಸಿಯಲ್ಲಿ ಅರೆದು ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆದುಕೊಳ್ಳಬೇಕು. ಆದ್ದರಿಂದ ನಯವಾದ, ಕಲೆಯಿಲ್ಲದ, ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯ. ಬೀಟ್ ರೂಟ್ ಜ್ಯೂಸ್ ಚರ್ಮವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಮುಖದಲ್ಲಿನ ರಂಧ್ರಗಳನ್ನು ತೆರವುಗೊಳಿಸುತ್ತದೆ. ಚರ್ಮ ಹೊಳೆಯುವಂತೆ ಮಾಡುತ್ತದೆ.

ಬೀಟ್‌ರೂಟ್ ಜ್ಯೂಸ್ ನಿತ್ಯ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್‌ರೂಟ್‌ನಲ್ಲಿ ಇರುವಂತಹ ಫಾಲಟೆ ಅಂಶ ಈ ಕಾರ್ಯಕ್ಕೆ ಕಾರಣ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.