ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸ ನಿಮಗಿದಿಯಾ.? ಹಾಗಾದ್ರೆ ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ಆಹಾರ ಸಮತೋಲನದಿಂದ ಕೂಡಿದ್ದರೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅದೇ ರೀತಿ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ. ನಾವು ನಮ್ಮ ಮನಸ್ಸಿನಲ್ಲಿ ತಿಳಿದುಕೊಂಡ ಆಹಾರಗಳು ಎಲ್ಲವೂ ಆರೋಗ್ಯಕರವಲ್ಲ. ಅದೇ ರೀತಿ ಊಟ ಮಾಡಿದ ತಕ್ಷಣ ಟೀ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಕರ ಎಂದು ಸಾಬೀತಾಗಿದೆ.

ಸಂಶೋಧನೆಯ ಪ್ರಕಾರ ಚಹಾ ಅಥವಾ ಕಾಫಿಯಲ್ಲಿ ಕಂಡುಬರುವ ಕೆಫೀನ್ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ, ಆದ್ದರಿಂದ ಊಟ ಮಾಡಿದ ತಕ್ಷಣ ಟೀ ಮತ್ತು ಕಾಫಿ ಕುಡಿಯಬೇಡಿ. ಊಟದ ನಂತರ ಕೆಫೀನ್ ಇರುವ ಯಾವುದೇ ಪಾನೀಯವನ್ನು ಕುಡಿಯುವುದು ಅಪಾಯಕಾರಿ ಎಂದು ಸೂಚಿಸುವ ಹಲವಾರು ಕಾರಣಗಳಿವೆ. ಅವುಗಳ ಬಗ್ಗೆ ಮಾಹಿತಿ ತಿಳಿದುಕೊಂಡರೆ ಉತ್ತಮ ಅರೋಗ್ಯ ಕಾಪಾಡಲು ಸಹಾಯವಾಗುತ್ತದೆ.

ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಣಾಮ : ಟೀ ಎಲೆಯಲ್ಲಿ ಆಮ್ಲೀಯ ಗುಣಗಳಿವೆ, ಇದು ದೇಹದಲ್ಲಿರುವ ಪ್ರೋಟೀನ್ ಅಂಶವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಪ್ರೋಟೀನು ಜೀರ್ಣಿಸಲು ಕಷ್ಟವಾಗುತ್ತದೆ. ಆದ್ದರಿಂದ ಊಟದ ನಂತರ ಟೀ ಕುಡಿಯಬೇಡಿ.

ಪೌಷ್ಟಿಕಾಂಶವನ್ನು ಹೀರಿಕೊಳ್ಳುವಿಕೆಯು : ಆಹಾರ ಸೇವನೆಯ ನಂತರ ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ, ಇದು ಆಹಾರದಲ್ಲಿನ ಪೋಷಕಾಂಶಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಸರಿಯಾಗಿ ಹೀರಿಕೊಳ್ಳುವುದಿಲ್ಲ.

ರಕ್ತದೊತ್ತಡ ಹೆಚ್ಚಳ : ಟೀಯಲ್ಲಿ ಕೆಫೀನ್ ಅಂಶ ಅಧಿಕವಾಗಿದ್ದು, ಅಧಿಕ ಆಹಾರ ಸೇವಿಸಿದ ನಂತರ ಸೇವಿಸಿದರೆ, ಇದು ದೇಹದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೃದಯ ತಜ್ಞರು ಊಟಮಾಡಿದ ನಂತರ ಚಹಾ ಕುಡಿಯಬಾರದು ಎಂದು ಹೇಳುತ್ತಾರೆ.

ಗ್ರೀನ್ ಟೀ ಅಥವಾ ಹರ್ಬಲ್ ಟೀ ಬಳಸಿ : ಊಟದ ನಂತರ ತಕ್ಷಣ ಹಾಲಿನ ಟೀ ಸೇವಿಸಬಾರದು, ಆದರೆ ಗ್ರೀನ್ ಟೀ ಅಥವಾ ಹರ್ಬಲ್ ಟೀ ಯನ್ನು ಸ್ವಲ್ಪ ಸಮಯದ ನಂತರ ಸೇವಿಸಬಹುದು ಏಕೆಂದರೆ ಅಂತಹ ಚಹಾದಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಪಾಲಿಫಿನಾಲ್ ಗಳು ಇವೆ. ಗ್ರೀನ್ ಅಥವಾ ಹರ್ಬಲ್ ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗದಂತೆ ತಡೆಯುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡುತ್ತದೆ.

1 ಗಂಟೆಯಊಟದನಂತರಟೀಕುಡಿಯಿರಿ. ಊಟದ ನಂತರ ಟೀ ಮತ್ತು ಕಾಫಿ ಕುಡಿಯಬೇಕೆಂದಿದ್ದರೆ 1 ಗಂಟೆಯ ನಂತರ ಕುಡಿಯಿರಿ. ಏಕೆಂದರೆ ಆಹಾರ ಸೇವಿಸಿದ 1 ಗಂಟೆಯ ಒಳಗೆ ಆಹಾರದಲ್ಲಿರುವ ಕಬ್ಬಿಣವನ್ನು ದೇಹವು ಅಪಾರಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಒಂದು ವೇಳೆ ಟೀ ಯನ್ನು ಆಹಾರದೊಂದಿಗೆ ಅಥವಾ ಊಟದ ನಂತರ ಸೇವಿಸಿದ ತಕ್ಷಣ, ಕಬ್ಬಿಣಾಂಶವು ಹೀರಿಕೊಳ್ಳಲ್ಪಡುವುದಿಲ್ಲ ಮತ್ತು ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.