ಪಾರ್ಕ್‌ನಲ್ಲಿ ಮಹಿಳೆಯೊಂದಿಗೆ ಸಮವಸ್ತ್ರದಲ್ಲಿಯೇ ಪೊಲೀಸ್ ಅಧಿಕಾರಿ ರೊಮ್ಯಾನ್ಸ್ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕರ್ತವ್ಯ ಸಮಯದಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸುತ್ತಿದ್ದ, ನಂತರ ಕಾರಿನ ಹಿಂಬದಿ ಸೀಟಿನಲ್ಲಿ ಅದೇ ಮಹಿಳೆಯೊಂದಿಗೆ (US Women) ರೊಮ್ಯಾನ್ಸ್‌ ಮಾಡ್ತಿದ್ದ ಅಮೆರಿಕದ ಪೊಲೀಸ್‌ ಅಧಿಕಾರಿಯನ್ನ (US Police Officer) ಅಮಾನತುಗೊಳಿಸಲಾಗಿದೆ.

ಪ್ರಿನ್ಸ್ ಜಾರ್ಜ್‌ನ ಕೌಂಟಿ ಪೊಲೀಸ್ (County Police) ಅಧಿಕಾರಿಯನ್ನ ಫ್ರಾನ್ಸೆಸ್ಕೊ ಮಾರ್ಲೆಟ್ ಎಂದು ಗುರುತಿಸಲಾಗಿದೆ. ಈತ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ.

ಬಳಿಕ ಆಕೆಯನ್ನ ಪೊಲೀಸ್‌ ಇಲಾಖೆಯ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡಿದ್ದಾನೆ. ಆಕೆಯೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಮೂಲಗಳ ಪ್ರಕಾರ ಆಕ್ಸನ್ ಹಿಲ್ ಪ್ರೌಢಶಾಲೆ ಪಕ್ಕದಲ್ಲಿರುವ ಕಾರ್ಸನ್ ಪಾರ್ಕ್‌ನಲ್ಲಿ (Park) ಈ ಘಟನೆ ನಡೆದಿದೆ.

ಬೋರೆಕ್ಯೂರ್ ಹೆಸರಿನ ಟ್ವಿಟ್ಟರ್‌ (X) ಖಾತೆಯು ಈ ಕುರಿತ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

47 ಸೆಕೆಂಡುಗಳ ವೀಡಿಯೋದಲ್ಲಿ ಪೊಲೀಸ್‌ ಅಧಿಕಾರಿ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ. ಬಳಿಕ ಆಕೆಯನ್ನ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಅಸಭ್ಯ ವರ್ತನೆ ತೋರಿದ್ದಾನೆ. ಸುಮಾರು 40 ನಿಮಿಷಗಳ ಕಾಲ ಕಾರಿನಲ್ಲೇ ಇದ್ದರು ಎನ್ನಲಾಗಿದೆ.

ಮಾರ್ಲೆಟ್ ಮತ್ತು ವಿಡಿಯೋದಲ್ಲಿರುವ ಮಹಿಳೆಯ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ ಪೊಲೀಸ್‌ ಅಧಿಕಾರಿ ಕರ್ತವ್ಯದಲ್ಲಿದ್ದ ಎಂಬ ಕಾರಣಕ್ಕೆ ಆತನನ್ನ ಅಮಾನತುಗೊಳಿಸಿದ್ದು, ತನಿಖೆ ಮುಂದುವರಿದಿದೆ.