ಜನಸ್ಪಂದನ ನ್ಯೂಸ್, ಡೆಸ್ಕ್ : ಒಬ್ಬ ಮನುಷ್ಯನ ವ್ಯಕ್ತಿತ್ವ ಮತ್ತು ಭವಿಷ್ಯ ಎಂಥದ್ದು ಅಂತ ಕೆಲವರು ಮುಖ ಲಕ್ಷಣ ನೋಡಿ ಹೋಳುತ್ತಾರೆ. ಇನ್ನು ಕೆಲವರು ಹಸ್ತ ರೇಖೆ ನೋಡಿ ಹೇಳುತ್ತಾರೆ ಅಂತ ನಾವೇಲ್ಲ ಕೇಳಿದ್ದೇವೆ. ಆದರೆ ತುಟಿಯ ಆಕಾರ ನೋಡಿಯೂ ಅವರ ಗುಣನಡತೆ ಹಾಗೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಹೇಗಂತ್ತಿರಾ..?
ದೊಡ್ಡ/ದಪ್ಪ ಮೇಲಿನ ತುಟಿ :
ಕೆಳಗಿನ ತುಟಿಗೆ ಹೋಲಿಸಿದರೆ ಮೇಲಿನ ತುಟಿ ದೊಡ್ಡ ಇದ್ದರೆ ಅಂತವರು ಪ್ರತಿ ವಿಚಾರಕ್ಕೂ ನಾಟಕ ಜಾಸ್ತಿ ಮಾಡುತ್ತಾರಂತೆ ಮತ್ತು ಮತ್ತೊಬ್ಬರ ಗಮನವನ್ನು ತಮ್ಮತ್ತ ಗಮನ ಸೆಳೆಯಲು ಬಯಸುತ್ತಾರೆ. ಅವರನ್ನೇ ತುಂಬಾ ಪ್ರೀತಿಸುತ್ತಾರೆ. ಇಂತವರ ಲವ್ ಲೈಫ್ ಚೆನ್ನಾಗಿರುತ್ತದೆ.
ದೊಡ್ಡ/ದಪ್ಪದಾದ ಕೆಳತುಟಿ :
ದೊಡ್ಡದಾದ ಕೆಳ ತುಟಿಯನ್ನು ಹೊಂದಿರುವ ಕಚೇರಿ ಕೆಲಸವನ್ನು ಮಾಡಲು ಇಷ್ಟ ಪಡುವುದಿಲ್ಲ. ಇಂತವರು ಮೋಜು-ಮಸ್ತಿ ಜೀವನ ಇಷ್ಟಪಡುತ್ತಾರೆ. ಹೊಸ ಸ್ಥಳಗಳಿಗೆ ಭೇಟಿ ನೀಡಲು, ಹೊಸ ಸ್ನೇಹಿತರನ್ನು ಹುಡುಕಲು ಮತ್ತು ಹೊಸ ಜನರನ್ನು ಭೇಟಿ ಮಾಡುವ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಆಸಕ್ತಿ ಹೊಂದಿರುತ್ತಾರೆ.
ತೆಳ್ಳ/ಸಣ್ಣ ತುಟಿಗಳು :
ತೆಳ್ಳಗಿನ ತುಟಿಗಳನ್ನು ಹೊಂದಿರುವವರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ. ಅವರು ಎಲ್ಲ ವಿಚಾರದಲ್ಲಿ ಸ್ವತಂತ್ರರಾಗಿರಲು ಬಯಸುತ್ತಾರೆ ಮತ್ತು ಯಾವುದೇ ರೀತಿಯ ಸಮಸ್ಯೆಯನ್ನು ನಿಭಾಯಿಸಬಲ್ಲರು. ಅವರು ಏಕಾಂತತೆಯನ್ನು ಹೆಚ್ಚು ಇಷ್ಟ ಪಡುತ್ತಾರೆ.
ತೆಳ್ಳಗಿನ ಮೇಲ್ದುಟಿ :
ಮೇಲಿನ ತುಟಿ ತುಂಬಾ ತೆಳ್ಳಗೆ ಇರುವವರು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇತರರನ್ನು ಮನವೊಲಿಸುವಲ್ಲಿ ಅತ್ಯುತ್ತಮರು. ಇವರಲ್ಲಿರುವ ಒಂದು ಸಮಸ್ಯೆಯೆಂದರೆ ಇವರು ಸಂಬಂಧವನ್ನು ಮುಂದುವರಿಸಲು ಪರದಾಡುತ್ತಾರೆ. ಹೀಗೇ ಒಬ್ಬೊಬ್ಬರ ತುಟಿಯ ಆಕಾರ ಅವರ ವ್ಯಕ್ತಿತ್ವವನ್ನು ಹೇಳುತ್ತದೆ.
ಚಾಚಿಕೊಂಡಿರುವ ತುಟಿಗಳು :
ಚಾಚಿಕೊಂಡಿರುವ ತುಟಿಗಳಿರುವವರ ಜೀವನದಲ್ಲಿ ಹಲವು ಏರಿಳಿತಗಳು ಇದ್ದೇ ಇರುತ್ತವೆ. ಹೀಗಾಗಿಯೇ ಅವರು ಜೀವನದಲ್ಲಿ ಆಗಾಗ ಬೇರೆಯವರ ಸಹಾಯ ಪಡೆಯಬೇಕಾಗಿ ಬರುತ್ತದೆ. ಈ ಜನರು ಕೆಟ್ಟ ಚಟಕ್ಕೆ ಬೀಳುವ ಸಾಧ್ಯತೆ ಹೆಚ್ಚು.
ತುಂಬು ಆಕಾರದದ ತುಟಿಗಳು :
ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸಮವಾಗಿ ಮತ್ತು ನೈಸರ್ಗಿಕವಾಗಿ ಕೊಬ್ಬಿದ ಈ ತುಟಿ ಆಕಾರವು ನೀವು ಬಲವಾದ ಪೋಷಕರ ಪ್ರವೃತ್ತಿಯನ್ನು ಹೊಂದಿರುವ ಸಹಾನುಭೂತಿಯ ವ್ಯಕ್ತಿ ಎಂದು ಸೂಚಿಸುತ್ತದೆ. ಈ ತುಟಿಯ ಆಕಾರವನ್ನು ಹೊಂದಿರುವ ಜನರು ಇತರರನ್ನು ರಕ್ಷಿಸಲು ಮತ್ತು ರಕ್ಷಿಸಲು ಸಹಜ ಬಯಕೆಯನ್ನು ಹೊಂದಿದ್ದಾರೆ; ಅವರ ಕಾಳಜಿ, ನಿಸ್ವಾರ್ಥ ಸ್ವಭಾವ ಎಂದರೆ ಅವರು ಇತರರ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ ಮತ್ತು ಹಾಗೆ ಮಾಡುವುದರಲ್ಲಿ ಹೆಚ್ಚಿನ ಆನಂದವನ್ನು ಪಡೆಯುತ್ತಾರೆ. ಅವರು ಸ್ನೇಹಿತರ ನಿಕಟ ವಲಯವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಗೌರವಿಸುತ್ತಾರೆ.