ಹಣ, ಒಡವೆಯ ದುರಾಸೆಗೆ ಬಾಯ್‌ಫ್ರೆಂಡ್ ಜೊತೆ ಸೇರಿ ಸ್ವಂತ ಅಕ್ಕನನ್ನೇ ಭೀಕರವಾಗಿ ಹತ್ಯೆಗೈದ ತಂಗಿ..!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನ ದುರಾಸೆಗೆ ಕೊನೆಯೇ ಇಲ್ಲಾ, ಅನ್ನೋದಕ್ಕೆ ಇಲ್ಲೊಂದು ನಿದರ್ಶನ ಇದೆ ನೋಡಿ. ಬಾಯ್ ಫ್ರೆಂಡ್ ಜೊತೆ ಸೇರಿ ಯುವತಿಯೋಬ್ಬಳು ಹಣ, ಒಡವೆ ಆಸೆಗೆ ಸ್ವಂತ ಅಕ್ಕನನ್ನೇ ಸಾಯಿಸಿರುವ ಘಟನೆ ಆಂಧ್ರಪ್ರದೇಶದ ಕೋರುಟ್ಲದಲ್ಲಿ ನಡೆದಿದೆ.

ಹಣ, ಒಡವೆ ಆಸೆಗೆ ಬಲಿಯಾದ ದುರ್ದೈವಿಯುವತಿಯ ಹೆಸರು ಬಂಕ ದೀಪ್ತಿ (22) ಎಂದು ತಿಳಿದು ಬಂದಿದೆ. ಮೃತಳ ತಂಗಿ ಬಂಕ ಚಂದನಾ ಹಾಗೂ ಚಂದನಾಳ ಬಾಯ್ಫ್ರೆಂಡ್ ಉಮರ್ ಶೇಖ್ ಸುಲ್ತಾನ್ ಕೊಲೆ ಮಾಡಿದ ಆರೋಪಿಗಳು.

ಅಂದುಕೊಂಡಂತೆ, ಚಂದನಾ ಆಗಸ್ಟ್ 28ರಂದು ತನ್ನ ಅಕ್ಕನಿಗೆ ವೋಡ್ಕಾವನ್ನು ಕುಡಿಸಿ ಮಲಗಿಸಿದ್ದಾಳೆ. ಬಳಿಕ ರಾತ್ರಿ 2 ಗಂಟೆ ಸುಮಾರಿಗೆ ಚಂದನಾ, ಉಮರ್ಗೆ ಕಾಲ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ. ಅದರಂತೆ ಆತ ಕಾರನ್ನು ಮನೆ ಹಿಂದೆ ಪಾರ್ಕ್ ಮಾಡಿ ಹಿಂದಿನ ಗೇಟ್ ಮೂಲಕ ಮನೆ ಒಳಗೆ ಬಂದಿದ್ದಾನೆ.

ಬಾಯ್ಫ್ರೆಂಡ್ ಬಳಿಕ ಮನೆಯ ಬೀರುನಲ್ಲಿದ್ದ ಭಾರೀ ಮೊತ್ತದ ಆಭರಣಗಳು ಹಾಗೂ ನಗದು ಹಣವನ್ನು ಕದಿಯುತ್ತಿದ್ದರು. ಆಗ ಮದ್ಯದ ಅಮಲಿನಲ್ಲಿ ಮಲಗಿದ್ದ ಅಕ್ಕ ದೀಪ್ತಿ ಎದ್ದು ತಂಗಿ ಮತ್ತು ಉಮರ್ ಕಳ್ಳತನ ಮಾಡುವುದನ್ನು ನೋಡಿ ಜೋರಾಗಿ ಕಿರುಚಿದ್ದಾಳೆ.

ಕಿರುಚುತ್ತಿದಂತೆಯೇ ತಕ್ಷಣ ಇಬ್ಬರು ಸೇರಿ ಅಕ್ಕ ದೀಪ್ತಿ ಮುಖಕ್ಕೆ, ಬಾಯಿಗೆ ಹಾಗೂ ದೇಹಕ್ಕೆ ಟೇಪ್ ಸುತ್ತಿ ಬಳಿಕ ಕೈ, ಕಾಲುಗಳನ್ನು ವೇಲಿನಿಂದ ಕಟ್ಟಿ ಹಾಕಿದ್ದಾರೆ. ಪ್ರಾಣ ಹೋಗುತ್ತಿದ್ದಂತೆಯೇ ಕಟ್ಟಿದ್ದ ವೇಲು ಹಾಗೂ ಟೇಪ್ ಬಿಚ್ಚಿ, ಮದ್ಯಪಾನ ಮಾಡಿ ಸಾವನ್ನಪ್ಪಿದ್ದಾಳೆ ಅನ್ನೋ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ನಗದು, ಚಿನ್ನಾಭರಣದ ಜೊತೆ ಅಲ್ಲಿಂದ ಅವರಿಬ್ಬರು ಎಸ್ಕೇಪ್ ಆಗಿದ್ದಾರೆ.

ಪೊಲೀಸರು ನಡೆಸಿದ ವಿಚಾರಣೆ ವೇಳೆ ಅವರಿಬ್ಬರು ತಪ್ಪನ್ನು ಒಪ್ಪಿಕೊಂಡಿದ್ದಾರೆ.