ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಅಟ್ಟಾಡಿಸಿಕೊಂಡು ಚಪ್ಪಲಿಯಿಂದ ಹೊಡೆದ ಮಹಿಳೆಯರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷನಿಗೆ ಮಹಿಳೆಯರೇ ಸೇರಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸಮೀಪದ ಕಸ್ಬಾ ಕಚೋಲಾ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಪ್ರಹ್ಲಾದ್ ನಾಥ್ ಎಂಬಾತನನ್ನು ಮಹಿಳೆಯರ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪ್ರಹ್ಲಾದ್ ನಾಥ್ ಕಾಮ ಪಿಶಾಚಿಯ ರೀತಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನಂತೆ. ಈತನ ಕಾಟಕ್ಕೆ ಅಲ್ಲಿನ ಮಹಿಳೆಯರು ಬೇಸತ್ತಿದ್ದರು.

ಹೀಗಾಗಿ ನೊಂದ ಮಹಿಳೆಯರ ಗುಂಪು ಪ್ರಹ್ಲಾದ್ ನಾಥ್​ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಮನಬಂದಂತೆ ಥಳಿಸಿ ಆತನ ಮೈ ಮೇಲಿದ್ದ ಬಟ್ಟೆ ಹರಿದು, ಚಪ್ಪಲಿಯಿಂದ ಮುಖಕ್ಕೆ ಬಾರಿಸಿದ್ದಾರೆ. ಈ ವೇಳೆ ಪ್ರಹ್ಲಾದ್​ ನಾಥ್​​ ಮಹಿಳೆಯರಿಂದ ತಪ್ಪಿಸಿಕೊಂಡು ಓಡಿ ಹೋಗಿ ಪಕ್ಕದ ಅಂಗಡಿಯೊಂದರಲ್ಲಿ ಆಶ್ರಯ ಪಡೆದಿದ್ದಾನೆ.

ಅಷ್ಟಕ್ಕೇ ಬಿಡದ ಮಹಿಳೆಯರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಚೆನ್ನಾಗಿ ಹೊಡೆದಿದ್ದಾರೆ.‌ ಈ ವೇಳೆ ಗ್ರಾಮಸ್ಥರು ನಿಂತು ನೋಡುತ್ತಿದ್ದರೂ ಯಾರೊಬ್ಬರು ಆತನ ಸಹಾಯಕ್ಕೆ ಬಂದಿಲ್ಲ.

ನಂತರ ಸುದ್ದಿ ತಿಳಿದು, ಸ್ಥಳಕ್ಕಾಗಮಿಸಿದ ಪೊಲೀಸರು ಗೂಸಾ ತಿಂದ ಮಾಜಿ ಅಧ್ಯಕ್ಷನನ್ನು ಠಾಣೆಗೆ ಕರೆದೊಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.