ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಅಗ್ರಹಾರದ ಕಟ್ಟಡವೊಂದರಲ್ಲಿ ಇದ್ದ ಬ್ಯೂಟಿಪಾರ್ಲರ್‌ಗೆ ಸಂಜೆ ದಾಳಿ ನಡೆಸಿದ ಕೃಷ್ಣರಾಜನಗರ ಪೊಲೀಸರು ಐವರು ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ.
ಬ್ಯೂಟಿ ಪಾರ್ಲರ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಒಡನಾಡಿ ಸಂಸ್ಥೆಗೆ ತಿಳಿಯಿತು.
ಸಂಸ್ಥೆಯು ಈ ಬಗ್ಗೆ ವಾಟ್ಸ್‌ಆಯಪ್ ಸಂದೇಶಗಳು, ವಿಡಿಯೋ ದಾಖಲೆಗಳನ್ನು ಸಂಗ್ರಹಿಸಿಕೊಂಡು ಕೃಷ್ಣರಾಜ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ. ಇದರ ಆಧಾರದಲ್ಲಿ ದಾಳಿ ನಡೆಸಿ ದೀಪು, ರಾಹುಲ್ ವಿಜಯ್, ಸ್ವಾಮಿ, ಗುರುಪ್ರಸಾದ್, ರಾಹುಲ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪ್ರದೀಪ್, ಸುಮ, ರಶ್ಮಿ, ಭಾನು ಇದ್ದರು ಎಂದು ತಿಳಿದುಬಂದಿದೆ.