Subsidy : LPG ಗ್ಯಾಸ್ ಸಬ್ಸಿಡಿ ರೂ.200 ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಇಲ್ವಾ ಎಂದು ಜಸ್ಟ್ ಹೀಗೆ ಚೆಕ್ ಮಾಡಿ.

ಜನಸ್ಪಂದನ ನ್ಯೂಸ್, ಬೆಂಗಳೂರು : ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ಹಣ 200 ರೂ. ನೀಡುವುದಾಗಿ ತಿಳಿಸಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ರೂ.200 ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ ರೂ.200 ಸಹಾಯಧನದ ಜೊತೆಗೆ ಹೆಚ್ಚುವರಿ ರೂ.200 ಅಂದರೆ ಒಟ್ಟಾರೆಯಾಗಿ ರೂ.400  ಸಬ್ಸಿಡಿ ಸಿಗಲಿದೆ.

ಎಲ್‌ಪಿಜಿ ಸಬ್ಸಿಡಿ ಹಣ ಬಂದಿರುವುದನ್ನು ಮೊಬೈಲ್ ಮೂಲಕವೇ ನೀವು ಹೀಗೆ ಚೆಕ್ ಮಾಡಬಹುದು.

ಹಂತ 1 : ಮೊದಲು ನೀವು https://www.mylpg.in ವೆಬ್ ಸೈಟ್ ಗೆ ಭೇಟಿ ನೀಡಬೇಕು . ಇದರಲ್ಲಿ ಎಲ್ಲಾ ಎಲ್‌ಪಿಜಿ ಕಂಪನಿಗಳ ಹೆಸರು ಇರುತ್ತದೆ. ಇದರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಬೇಕು.

ಹಂತ 2 : ನಿಮ್ಮ ಆಯ್ಕೆ ಭಾಷೆ ಕನ್ನಡ ಆಗಿದ್ದರೆ ಭಾಷೆಗಳು ಆಯ್ಕೆಯಲ್ಲಿ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ.

ಹಂತ 3 : ನೀವು ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಎಲ್‌ಪಿಜಿ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಮುಂದುವರೆಯಿರಿ.

ಹಂತ 4 : ನಂತರ ಮೊಬೈಲ್‌ಗೆ OTP ಬರುತ್ತದೆ, ನಂತರ ಮತ್ತೆ Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಅದರ ಮೇಲೆ ಮೇಲೆ ಕ್ಲಿಕ್ ಮಾಡಿ.ಮತ್ತೊಂದು OTP ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ.

ಹಂತ 5 : ಬಳಕೆದಾರರ ID ಮತ್ತು Password create ಆಪ್ಷನ್ ಇರುತ್ತದೆ ಅದನ್ನು ಕಂಪ್ಲೀಟ್ ಮಾಡಿ.

ಹಂತ 6 : ನೀವು ಕ್ರಿಯೇಟ್ ಮಾಡಿದ ID ಮತ್ತು Password ಬಳಸಿ ಲಾಗಿನ್ ಆಗಿರಿ.

ಹಂತ 7 : ಲಾಗಿನ್ ಆಗಿ ಮೆನುಗೆ ಹೋದರೆ ಸಿಲಿಂಡರ್ ಬುಕಿಂಗ್ ಹಿಸ್ಟರಿ ಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

ಹಂತ 8 : ಇದನ್ನು ಕ್ಲಿಕ್ ಮಾಡಿದ ಕೂಡಲೇ ನೀವು ಯಾವಾಗ ಸಿಲಿಂಡರ್ ಬುಕ್ ಮಾಡಿದ್ದೀರಾ, ಆ ಬುಕಿಂಗ್ ನಿಮಗೆ ಎಷ್ಟು ಸಬ್ಸಿಡಿ ಹಣ ಬಂದಿದೆ, ಯಾವ ಖಾತೆಗೆ ಜಮೆ ಆಗಿದೆ ಎನ್ನುವ ಸಂಪೂರ್ಣ ಡಿಟೇಲ್ಸ್ ನಿಮಗೆ ಸಿಗುತ್ತದೆ. (ಏಜೇನ್ಸಿಸ್)