ಖಾಸಗಿ ಭಾಗದಲ್ಲಿ ತುರಿಕೆ ಕಿರಿಕಿರಿಯೇ.? ಇಲ್ಲಿದೆ ನೋಡಿ “ಮನೆ ಮದ್ದು”.!

ಜನಸ್ಪಂದನ ನ್ಯೂಸ್, ಆರೋಗ್ಯ : ಮಹಿಳೆಯ/ಪುರುಷರ ಖಾಸಗಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳೋದು ಸಹಜ. ಅನೇಕ ಬಾರಿ ಈ ವಿಷಯವನ್ನು ಯಾರ ಬಳಿಯೂ ಹೇಳುವುದಿಲ್ಲ. ಹಾಗೆ ಮಾಡಿದಾಗ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುತ್ತದೆ.

ಮನೆಯಿಂದ ಹೊರಗೆ ಹೋದಾಗ ಇದು ಸಾಕಷ್ಟು ಕಿರಿಕಿರಿಯಾಗುತ್ತದೆ. ಬೇರೆಯವರ ಮುಂದೆ ಮುಜುಗರಪಟ್ಟುಕೊಳ್ಳುವ ಸ್ಥಿತಿಯನ್ನು ಕೂಡ ನಿರ್ಮಾಣಮಾಡುತ್ತದೆ.

ಇನ್ನು ಮಹಿಳೆಯರು ವೈದ್ಯರ ಬಳಿ ಹೋಗಲು ನಾಚಿಕೆಪಡುತ್ತಾರೆ. ಅಂತವರು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದಾಗಿದೆ.

1) ಆಪಲ್ ಸೈಡರ್ ವಿನೆಗರ್ : ಖಾಸಗಿ ಭಾಗಗಳ ತುರಿಕೆಯನ್ನು ತಪ್ಪಿಸಲು ಆಪಲ್ ಸೈಡರ್ ವಿನೆಗರ್ ಬಹಳ ಒಳ್ಳೆಯದು. ಬೆಚ್ಚಗಿನ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಖಾಸಗಿ ಭಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ದಿನಕ್ಕೆ 2-3 ಬಾರಿ ಹೀಗೆ ಮಾಡಿದ್ರೆ ಸೋಂಕು ತಗುಲಿದ್ದರೆ ಕಡಿಮೆಯಾಗುತ್ತದೆ.

2) ಐಸ್ : ತುರಿಕೆ ಸಮಸ್ಯೆ ಜೋರಾಗಿದ್ದಲ್ಲಿ ಐಸ್ ಬಳಸಬಹುದು. ಆದ್ರೆ ನೇರವಾಗಿ ಐಸ್ ಉಪಯೋಗಿಸಬೇಡಿ. ಒಂದು ಬಟ್ಟೆಯೊಳಗೆ ಐಸ್ ಇಟ್ಟು ಬಳಸಿ.

3) ಬೆಳ್ಳುಳ್ಳಿ : ಬೆಳ್ಳುಳ್ಳಿ ತಿನ್ನುವ ಮೂಲಕ ಕೂಡ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನುತ್ತ ಬಂದಲ್ಲಿ ಸೋಂಕು ಕಡಿಮೆಯಾಗುತ್ತದೆ.

4) ಮೊಸರು : ಸಕ್ಕರೆ ಇಲ್ಲದ ಮೊಸರನ್ನು ಪ್ರತಿದಿನ ಸೇವನೆ ಮಾಡಿ. ಖಾಸಗಿ ಭಾಗಕ್ಕೆ ಮೊಸರು ಹಚ್ಚಿಕೊಳ್ಳುವುದರಿಂದಲೂ ಸಮಸ್ಯೆ ದೂರ ಮಾಡಬಹುದು.

5) ಉಪ್ಪು-ನೀರು : ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಆ ನೀರಿನಲ್ಲಿ ಖಾಸಗಿ ಭಾಗವನ್ನು ತೊಳೆದುಕೊಳ್ಳಿ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲಲು ನೆರವಾಗುತ್ತದೆ.

6) ತುಳಸಿ-ನೀರು : ನೀರಿಗೆ ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ದಿನದಲ್ಲಿ 2-3 ಬಾರಿ ಕುಡಿಯುತ್ತ ಬಂದರೆ ದೇಹದ ಯಾವುದೇ ಭಾಗದಲ್ಲಿ ತುರಿಕೆ ಕಾಣಿಸಿಕೊಂಡರೂ ಕಡಿಮೆಯಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.