ಬಿಕ್ಕಳಿಕೆ ಏಕೆ ಬರುತ್ತದೆ? ಬಿಕ್ಕಳಿಕೆ ನಿಲ್ಲಿಸಲು ಈ ಸಲಹೆಗಳನ್ನು ಪಾಲಿಸಿ.

ಜನಸ್ಪಂದನ ನ್ಯೂಸ್, ಡೆಸ್ಕ್ : ನಮಗೆ ಬರುವ ಕೆಮ್ಮು ಸೀನು ಅಥವಾ ಬಿಕ್ಕಳಿಕೆ ನಾಲ್ಕು ಜನರ ಮಧ್ಯೆ ಒಂದು ರೀತಿಯ ಕಿರಿಕಿರಿ ಅನುಭವವನ್ನು ಉಂಟು ಮಾಡುತ್ತವೆ. ಅತಿಯಾದ ಶೀತ ಆದಾಗ ಸೀನು ಬರುವುದು, ಕೆಮ್ಮು ಬರುವುದು ಸಹಜ. ಆದರೆ ಬಿಕ್ಕಳಿಕೆ ಕೆಲವರಿಗೆ ಹೆಚ್ಚು ಖಾರ ತಿಂದಾಗ ಬರಬಹುದು ಅಥವಾ ಇದ್ದಕ್ಕಿದ್ದಂತೆ ಸುಮ್ಮನೆ ಕುಳಿತಿದ್ದಾಗ ಕೂಡ ಬರಬಹುದು.

ಆದರೆ ಹೀಗೆ ಬಂದಂತಹ ಬಿಕ್ಕಳಿಕೆ ತಾತ್ಕಾಲಿಕವಾಗಿದ್ದು, ಕೆಲವರಿಗೆ ಸ್ವಲ್ಪ ಹೊತ್ತಿನಲ್ಲಿ ಹೊರಟುಹೋಗುತ್ತದೆ. ಇನ್ನು ಕೆಲವರಿಗೆ ಇಡೀ ದಿನ ಅಥವಾ ದಿನಗಟ್ಟಲೇ ಇರುತ್ತದೆ.

ಬಿಕ್ಕಳಿಕೆ ಏಕೆ ಬರುವುದು.?
1) ಇದೊಂದು ಅಸಹಜ ಪ್ರಕ್ರಿಯೆ. ನಮ್ಮ ಹೊಟ್ಟೆಯ ಭಾಗವನ್ನು ಎದೆಯ ಭಾಗದಿಂದ ಡಯಾಫ್ರಮ್ ಬೇರ್ಪಡಿಸಿದೆ. ನಾವು ಉಸಿರಾಡುವ ಸಂದರ್ಭದಲ್ಲಿ ಇದು ನಮ್ಮ ಎದೆಯ ಭಾಗದ ಮಾಂಸಖಂಡಗಳನ್ನು ಒಳಗೆ ಮತ್ತು ಹೊರಗೆ ತರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಈ ರೀತಿಯ ಸಂದರ್ಭಗಳಲ್ಲಿ ಕೆಲವೊಮ್ಮೆ ಇದು ಹಠಾತ್ತಾಗಿ ಮುಚ್ಚಿಕೊಂಡರೆ ಆಗ ನಮ್ಮ ಗಂಟಲಿನ ಭಾಗದ ಕಡೆಯಿಂದ ಬಿಕ್ಕಳಿಕೆ ಸದ್ದು ಹೊರಬರುತ್ತದೆ.

2) ಕೆಲವರಿಗೆ ಹೊಟ್ಟೆಯಲ್ಲಿ ಉಂಟಾಗುವ ಕೆಲವೊಂದು ಸಮಸ್ಯೆಗಳು ಮತ್ತು ಕರುಳಿನ ಭಾಗದಲ್ಲಿ ಕಂಡುಬರುವ ಅಸ್ವಸ್ಥತೆ, ನ್ಯೂಮೋನಿಯ ಮತ್ತು ಮದ್ಯಪಾನ ಸೇವನೆ ಇಂತಹ ತೊಂದರೆಗೆ ಕಾರಣವಾಗುತ್ತದೆ.

3) ಕೆಲವರಿಗೆ ಬರುವ ಬಿಕ್ಕಳಿಕೆ ಸ್ವಲ್ಪ ಹೊತ್ತು ಇದ್ದು ನಂತರ ಹೊರಟುಹೋಗುತ್ತದೆ. ಕೆಲವರಿಗೆ ಆಗಾಗ ಬಿಕ್ಕಳಿಕೆ ಬರುತ್ತದೆ ಮತ್ತು ತಿಂಗಳುಗಟ್ಟಲೆ ಉಳಿಯುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ದೇಹದ ತೂಕ ಕಡಿಮೆಯಾಗುವುದು ಗ್ಯಾರಂಟಿ. ಇದರಿಂದ ನಿದ್ರಾಹೀನತೆಯ ಸಮಸ್ಯೆ ಮತ್ತು ಉಸಿರಾಟದ ತೊಂದರೆ ಕೂಡ ಎದುರಾಗಬಹುದು.

4) ನಾವು ಅತಿಯಾಗಿ ಊಟ ಮಾಡಿದ ಸಂದರ್ಭದಲ್ಲಿ, ಹೆಚ್ಚು ಖಾರದ ಪದಾರ್ಥಗಳನ್ನು ಸೇವನೆ ಮಾಡಿದ ಸಮಯದಲ್ಲಿ, ಮದ್ಯಪಾನ ಅಥವಾ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವನೆ ಮಾಡಿದ ಸಮಯದಲ್ಲಿ ಇಲ್ಲವೆಂದರೆ ಭಾವನಾತ್ಮಕವಾಗಿ ನಾವು ಯಾವುದಾದರೂ ಉದ್ವೇಗಕ್ಕೆ ಒಳಗಾದ ತಕ್ಷಣದಲ್ಲಿ, ಉಸಿರಾಡುವ ಸಂದರ್ಭದಲ್ಲಿ ಅತಿ ಹೆಚ್ಚು ಗಾಳಿ ಒಳಗೆ ತೆಗೆದುಕೊಂಡಾಗ, ಬಬಲ್ ಗಮ್ ಜಗಿಯುವಾಗ ಈ ರೀತಿಯ ಬಿಕ್ಕಳಿಕೆ ಕಂಡುಬರುತ್ತದೆ.

5) ಕೆಲವರಿಗೆ ಇದರಿಂದ ಕುತ್ತಿಗೆಯ ಭಾಗದಲ್ಲಿ ಗಂಟುಗಳು ಕಂಡುಬರುವ ಸಾಧ್ಯತೆ ಕೂಡ ಇದೆ. ಇನ್ನು ಕೆಲವರಿಗೆ ಬಿಕ್ಕಳಿಕೆ ಅತಿಯಾದರೆ, ಮೆದುಳಿಗೆ ಹಾನಿಯಾಗುತ್ತದೆ ಜೊತೆಗೆ ನರಮಂಡಲದ ಕಾರ್ಯ ಚಟುವಟಿಕೆಗೆ ಕೂಡ ತೊಂದರೆ ಉಂಟಾಗುತ್ತದೆ.

ದೇಹದಲ್ಲಿ ಪದೇಪದೇ ಉಂಟಾಗುವ ಎಲೆಕ್ಟ್ರೋಲೈಟ್ ಅಂಶಗಳ ಅಸಮತೋಲನ, ಮೂತ್ರಪಿಂಡಗಳ ಸಮಸ್ಯೆ, ಮಧುಮೇಹ ಇತ್ಯಾದಿಗಳು ಕೂಡ ಬಿಕ್ಕಳಿಕೆ ಸಮಸ್ಯೆಗೆ ಪ್ರಮುಖ ಕಾರಣ ಆಗಬಹುದು.

ಬಿಕ್ಕಳಿಕೆ ನಿಲ್ಲಿಸಲು ಕೆಲವು ಸಲಹೆಗಳು :
• ನೀವು ಉಸಿರನ್ನು ಬಿಗಿ ಹಿಡಿದುಕೊಂಡು ಮೂರು ಬಾರಿ ಹಿಂದಿಂದೆ ಗಾಳಿಯನ್ನು ನುಂಗಿ. ಇದರಿಂದಲೂ ಬಿಕ್ಕಳಿಕೆ ಕಡಿಮೆಯಾಗಬಹುದು.

• ಸುಮಾರು ಹತ್ತು ಸೆಕೆಂಡುಗಳ ಕಾಲ ನಮ್ಮ ಉಸಿರನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು. ಅಂದರೆ ಈ ಸಮಯದಲ್ಲಿ ಉಸಿರಾಡಬಹುದು. ಇದರಿಂದ ಬಿಕ್ಕಳಿಕೆ ತಕ್ಷಣವೇ ನಿಂತುಹೋಗುತ್ತದೆ.

• ಬಿಕ್ಕಳಿಕೆ ಬಂದಂತಹ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.

• ಒಂದು ಪೇಪರ್ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಉಸಿರಾಡಬೇಕು

• ಸುಮಾರು ಆರು ಹಸಿರು ಬಣ್ಣದ ಏಲಕ್ಕಿಯನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಉಗುರುಬೆಚ್ಚಗಿನ ತಾಪಮಾನದಲ್ಲಿ ಇರುವಾಗ ಅದನ್ನು ಕುಡಿಯಬೇಕು.

• ಸ್ವಲ್ಪ ಹರಳೆಣ್ಣೆ ಜೊತೆಗೆ ಜೇನುತುಪ್ಪವನ್ನು ವಿಶ್ವನ ಮಾಡಿಕೊಂಡು ದಿನದಲ್ಲಿ ಎರಡರಿಂದ ಮೂರು ಬಾರಿ ಸೇವನೆ ಮಾಡಿ.

• ರೆಫ್ರಿಜರೇಟರ್ ನಲ್ಲಿ ಇರುವ ಒಂದು ಐಸ್ ಕ್ಯೂಬ್ ಅನ್ನು ಪುಡಿಮಾಡಿಕೊಂಡು ಅದನ್ನು ಸೇವಿಸಿ

• ನಿಮ್ಮ ನಾಲಿಗೆ ಹೊರಗೆ ಚಾಚಿ ನಿಮ್ಮ ಎರಡು ಬೆರಳುಗಳಿಂದ ಅದನ್ನು ಬಿಗಿಯಾಗಿ ಸ್ವಲ್ಪ ಹೊತ್ತು ಹಿಡಿದುಕೊಳ್ಳಿ.

• ಒಂದು ಬಟ್ಟಲು ಮೊಸರಿಗೆ ಸ್ವಲ್ಪ ಉಪ್ಪು ಹಾಕಿ ಸೇವನೆ ಮಾಡಬೇಕು

• 1 ಟೇಬಲ್ ಚಮಚ ವೈಟ್ ವಿನೆಗರ್ ಸೇವನೆ ಮಾಡಿ