ತನಗಿಂತ ಕಿರಿಯನನ್ನು ಪ್ರೀತಿಸಿ ಮದುವೆಯಾದ ನರ್ಸ್ ; ಆಮೇಲೆನಾಯ್ತು?

ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ತನಗಿಂತ ಕಿರಿಯನನ್ನು ಪ್ರೀತಿಸಿ ಮದುವೆಯಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ನಾಗಮಣಿ (23) ಎಂದು ತಿಳಿದುಬಂದಿದೆ.

ಖಾಸಗಿ ಕ್ಲಿನಿಕ್’ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ಒಂದೂವರೆ ವರ್ಷದ ಹಿಂದೆ ತನಗಿಂತ ಎರಡು ವರ್ಷ ಚಿಕ್ಕವನಾಗಿದ್ದ ತಾತಹಳ್ಳಿ ಗ್ರಾಮದ ಪವನ್ (21) ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು.

ಯುವತಿ ಬೇರೆ ಸಮುದಾಯ ಎಂಬ ಕಾರಣಕ್ಕೆ ಪವನ್ ಕುಟುಂಬದವರು ಮನೆಗೆ ಸೇರಿಸಿರಲಿಲ್ಲ. ಹೀಗಾಗಿ ಇಬ್ಬರು ಶಿಡ್ಲಘಟ್ಟ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಆದರೀಗ ಮಹಿಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.