ಕಚೇರಿಯನ್ನೇ ಬಾರ್ ಮಾಡಿಕೊಂಡ ನೌಕರ, ಕರ್ತವ್ಯದ ವೇಳೆಯಲ್ಲೇ ಮದ್ಯ ಸೇವನೆ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್ ಡೆಸ್ಕ್ : ಕರ್ತವ್ಯದ ವೇಳೆ ಸರ್ಕಾರಿ ನೌಕರನೊಬ್ಬ ಕಚೇರಿಯಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸರ್ಕಾರಿ ನೌಕರ ಕಪೂರ್ ಸಿಂಗ್ ಎಂದು ವರದಿಯಾಗಿದೆ.

ಈತ ಉತ್ತರ ಪ್ರದೇಶದ ಸ್ವೈಜ್‌ಪುರದ ನೋಂದಾವಣೆ ಇಲಾಖೆಯಲ್ಲಿ ನಿಯೋಜನೆಗೊಂಡ ನೌಕರನಾಗಿದ್ದಾನೆ.

ಕರ್ತವ್ಯದ ವೇಳೆಯಲ್ಲೇ ಅದೂ ಕಚೇರಿಯಲ್ಲಿಯೇ ಮದ್ಯ ಸೇವನೆ ಮಾಡಿದ್ದಾನೆ.

ಈತನ ಅನುಚಿತ ವರ್ತನೆ ವಿಡಿಯೋ ವೈರಲ್ ಆಗಿದ್ದು, ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.