ಜನಸ್ಪಂದನ ವಾರ್ತೆ, ದೊಡ್ಡಬಳ್ಳಾಪುರ : ನಗರದ ಇಸ್ಲಾಂಪುರದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ನೆಲಮಂಗಲದಿಂದ ದೊಡ್ಡಬಳ್ಳಾಪುರದ ಕಡೆಗೆ ಶನಿವಾರ ರಾತ್ರಿ 9-30ರ ಸುಮಾರಿಗೆ ಬರುತ್ತಿದ್ದ ಕ್ಯಾಂಟರ್ ಕೆಳಗೆ ರಸ್ತೆ ಬದಿ ಕೈಕಟ್ಟಿಕೊಂಡು ನಿಂತಿದ್ದ ಅಪರಿಚಿತ ವ್ಯಕ್ತಿ ನೋಡನೋಡುತ್ತಲೇ ದಿಢೀರ್ ಆಗಿ ಹಾರಿದ್ದಾನೆ.
ಚಲಿಸುತ್ತಿದ್ದ ಲಾರಿ(ಕ್ಯಾಂಟರ್) ಕೆಳಗೆ ಹಾರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕ್ಯಾಂಟರ್ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ. ವ್ಯಕ್ತಿಯ ಊರು, ಹೆಸರು ಸೇರಿದಂತೆ ಯಾವುದೇ ವಿವರ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿದ್ದಾರೆ.