ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ದೇವರನ್ನು ಒಲಿಸಿಕೊಳ್ಳಲು ಉಪವಾಸ ಆಚರಿಸುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಎಲ್ಲ ಮತ ಬಾಂಧವರಲ್ಲಿ ಉಪವಾಸ ಒಂದು ಧಾರ್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಿಂದೂ ಧರ್ಮದಲ್ಲಿ ವಿವಿಧ ವಿಶೇಷ ದಿನಗಳು, ಹಬ್ಬ ಸೇರಿದಂತೆ ಇತರೆ ಸಮಯದಲ್ಲಿ ಉಪವಾಸದ ಆಚರಣೆ ಮಾಡಲಾಗುತ್ತದೆ. ಉಪವಾಸದ ವೇಳೆ ಅನೇಕ ನಿಯಮಗಳು ಇದೆ. ವೈಜ್ಞಾನಿಕ, ಆರೋಗ್ಯ ದೃಷ್ಟಿಯಿಂದಲೂ ಉಪವಾಸ ಮಾಡುವುದು ಒಳ್ಳೆಯ ಅಭ್ಯಾಸ.
ಉಪವಾಸ ಮಾಡುವುದರಿಂದ ದೇಹದ ಕ್ಯಾಲೋರಿಗಳನ್ನು ನಿಯಂತ್ರಿಸಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಚಯಾಪಚಯ ಸಮಸ್ಯೆಗಳೂ ಕೂಡ ದೂರವಾಗುತ್ತದೆ. ಇದರೊಂದಿಗೆ ಮಾನಸಿಕ ಅಸ್ವಸ್ಥತೆಗಳು ಮತ್ತು ಉರಿಯೂತದ ಸಮಸ್ಯೆಗಳಿಗೂ ಪರಿಹಾರ ಕಂಡು ಬರುತ್ತದೆ.
ಆದರೆ ಇದರಿಂದ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ.
1) ಉಪವಾಸ ಮಾಡುವುದರಿಂದ ದೇಹದ ಕ್ಯಾಲೋರಿಗಳನ್ನು ನಿಯಂತ್ರಿಸಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಚಯಾಪಚಯ ಸಮಸ್ಯೆಗಳೂ ಕೂಡ ದೂರವಾಗುತ್ತದೆ. ಇದರೊಂದಿಗೆ ಮಾನಸಿಕ ಅಸ್ವಸ್ಥತೆಗಳು ಮತ್ತು ಉರಿಯೂತದ ಸಮಸ್ಯೆಗಳಿಗೂ ಪರಿಹಾರ ಕಂಡು ಬರುತ್ತದೆ.
2) ಉಪವಾಸ ಮಾಡುವುದರಿಂದ ಇಂದ್ರೀಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಹಾಗೆಯೇ ಸಕರಾತ್ಮಕ ಚಿಂತನೆಗಳನ್ನು ಹೆಚ್ಚಿಸಿ, ನಕರಾತ್ಮಕ ವಿಚಾರಗಳನ್ನು ದೂರ ಮಾಡಬಹುದು. ಇದರಿಂದ ಮಾನಸಿಕ ಆರೋಗ್ಯ ಹೆಚ್ಚುತ್ತದೆ.
3) ಉಪವಾಸ ಹಾಗೂ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಸ್ಥೂಲಕಾಯತೆ ಸಮಸ್ಯೆಯನ್ನೂ ಸಹ ದೂರ ಮಾಡಬಹುದು. ಹಾಗೆಯೇ ದೇಹದಲ್ಲಿ ಕ್ಯಾಲೋರಿ ನಿಯಂತ್ರಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
4) ಇಷ್ಟೇ ಅಲ್ಲದೆ ಉಪವಾಸ ವ್ರತ ಕೈಗೊಳ್ಳುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಕೂಡ ಸಿಗುತ್ತವೆ. ಅದರಲ್ಲಿ ಮುಖ್ಯವಾಗಿ ಸಂಧಿವಾತದಂಥ ಸಮಸ್ಯೆಗಳಿಂದ ಪರಿಹಾರ ಕಾಣಬಹುದು.
5) ಇನ್ನು ಕ್ರಮ ಬದ್ಧವಾಗಿ ಉಪವಾಸ ಆಚರಿಸುತ್ತಾ ಬಂದರೆ ಹೊಸ ಚೈತನ್ಯ ಮೂಡುವುದಲ್ಲದೆ, ಉಲ್ಲಾಸಭರಿತರಾಗುತ್ತೀರಿ. ಹೀಗಾಗಿಯೇ ಅನೇಕರು ವಾರದಲ್ಲಿ ಒಂದೆರಡು ಬಾರಿ ಉಪವಾಸ ಕೈಗೊಳ್ಳುತ್ತಾರೆ.
6) ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಕೂಡ ಸುಧಾರಿಸುತ್ತದೆ. ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ಹಸಿ ತರಕಾರಿಗಳ ಸೂಪ್ ಸೇವನೆಯಿಂದ ಮತ್ತಷ್ಟು ಆರೋಗ್ಯವಂತರಾಗಬಹುದು.