ಆಟವಾಡುತ್ತಿದ್ದ 3 ವರ್ಷದ ಮಗು ಬಾವಿಗೆ ಬಿದ್ದು ಸಾವು.!

ಜನಸ್ಪಂದನ ನ್ಯೂಸ್, ಉತ್ತರ ಕನ್ನಡ : ಉತ್ತರ ಜಿಲ್ಲೆಯ ಕಾರವಾರದ ಹರಿದೇವ ನಗರದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಸೂರಜ್ ಬಂಟ್ ಎಂಬವರ ಪುತ್ರಿ ಸ್ತುತಿ (3) ಮೃತಪಟ್ಟ ಮಗು ಎಂದು ತಿಳಿದುಬಂದಿದೆ.

ಮಗು ಆಟವಾಡುತ್ತಾ ಸಾರ್ವಜನಿಕ ಬಾವಿ ಹತ್ತಿರ ಹೋಗಿದ್ದು, ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿ ರಸ್ತೆ ಪಕ್ಕದಲ್ಲೇ ಇದೆ. ಇದಕ್ಕೆ ಕಟ್ಟಿದ ಕಟ್ಟೆ ತುಂಬಾ ಕೆಳಮಟ್ಟದಲ್ಲಿದೆ. ಬಾವಿ ಕಟ್ಟೆಯನ್ನು ಎತ್ತರ ಕಟ್ಟದೇ ಇರುವುದೇ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.