ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಯ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಳ್ಳೋದು ಟ್ರೆಂಡ್ ಆಗಿದೆ. ಎಲ್ಲರ ಚಿತ್ತ ತಮ್ಮತ್ತ ಸೆಳೆಯೋಕೆ ಜೋಡಿ ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ವಧು ಸೀರೆಯನ್ನು ಪಂಚೆಯಂತೆ ಎತ್ತಿ ಕಟ್ಟಿ ಫೋಟೋ ಶೂಟ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಇತ್ತಿಚಿಗೆ ಈ ವಿಡಿಯೋ ವೈರಲ್ ಆಗಿದ್ದು, ವಧು ಸೀರೆಯನ್ನು ಪಂಚೆಯಂತೆ ಎತ್ತಿ ಕಟ್ಟಿ ಕಾಲಿನ ಟ್ಯಾಟೂ ತೋರಿಸಿದ್ದಾಳೆ.
ವಧು ಕಾಡಿನ ಮಧ್ಯೆ ತಾನು ಮದುವೆಗೆ ತೊಟ್ಟ ಸೀರೆ ಮೊಣಕಾಲಿನವರೆಗೂ ಎತ್ತಿಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿದ್ದಾಳೆ. ಸದ್ಯ ಈ ಫೋಟೋ ಶೂಟ್‌ನ ಚಿತ್ರಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ವೆಡ್ಡಿಂಗ್ ಫೋಟೋಶೂಟ್ ಅಂದ್ರೆ ವಧು ಸೂಪರ್ ಆಗಿ ಡ್ರೆಸ್ ಮಾಡ್ಕೊಂಡು ಫೋಟೋಗಳಿಗೆ ಫೋಸ್ ಕೊಡೋದು ಸಾಮಾನ್ಯ. ಆದ್ರೆ ಇಲ್ಲಿ ಮಾತ್ರ ವಧು, ಸಾಂಪ್ರದಾಯಿಕವಾಗಿ ಸೀರೆ ಉಟ್ಟು, ಆಭರಣಗಳನ್ನು ಹಾಕಿದ್ದಾಳೆ. ಅಶ್ಲೀಲವಾಗಿ ಸೀರೆ ಮೇಲಕ್ಕೆತ್ತಿ ಕಟ್ಟಿದ್ದಾಳೆ.
ಸೀರೆಯನ್ನು ಇನ್ನೂ ಸ್ಪಲ್ಪ ಮೇಲಕ್ಕೆತ್ತಿ ಕಟ್ಟಿದ್ದರೆ ಸರಿಯಾಗುತ್ತಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತೋರಿಸಬೇಕೆಂದು ಹೊರಟಿದ್ದೀರಾ, ಅಡಗಿಸಬೇಕೆಂದು ಹೊರಟಿದ್ದೀರಾ ಮೊದಲು ಡಿಸೈಡ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ವ್ಯಕ್ತಿ, ಇವರು ಖಂಡಿತವಾಗಿಯೂ ವರ್ಕ್‌ಔಟ್ ಮಾಡಬೇಕು ಎಂದಿದ್ದಾರೆ. ಇನ್ನೊಬ್ಬರು, ಟ್ಯಾಟೂ ಎಲ್ಲಿಯವರೆಗೆ ಇದೆ ತೋರಿಸಿ ಎಂದು ಕಮೆಂಟ್ ಮಾಡಿದ್ದಾರೆ.