ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಆಯನೂರು ನಾಡ ಕಚೇರಿಯ ಉಪ ತಹಶೀಲ್ದಾರ್ ಬಗರ್ ಹುಕುಂ ಭೂಮಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉಪ ತಹಶೀಲ್ದಾರ್ ಪರಮೇಶ್ ನಾಯ್ಕ್ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಡಿವೈಎಸ್ಪಿ ಈಶ್ವರ ನಾಯಕ್ ತಂಡದ ಬಲೆಗೆ ಬಿದ್ದಿದ್ದಾರೆ.
ಅಬ್ಬಲಗೆರೆ ನಿವಾಸಿ ಶಿವರಾಜ್ ಎಂಬುವರು ಕ್ಯಾತನಕೊಪ್ಪ ಗ್ರಾಮದ ಸಮೀಪ ಎರಡು ಎಕರೆ ಬಗರ್ ಹುಕುಂ ಭೂಮಿ ಖಾತೆಗೆ ಸೇರಿಸುವಂತೆ ಬ್ರೋಕರ್ ಪ್ರಕಾಶ್ ಎಂಬುವರ ಮೂಲಕ ಉಪ ತಹಶೀಲ್ದಾರ್ರೊಂದಿಗೆ ಮಾತನಾಡಿದ್ದರು.
ಖಾತೆ ಮಾಡಿಕೊಡಲು 40 ಸಾವಿರ ರೂ. ನೀಡಬೇಕೆಂದು ಮಾತುಕತೆ ಆಗಿತ್ತು. ಅಂತೆಯೇ ಇಂದು 30 ಸಾವಿರ ರೂ. ನೀಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಉಪ ತಹಶೀಲ್ದಾರ್ ಜೊತೆಗೆ ಬ್ರೋಕರ್ ಸಹ ಸಿಕ್ಕಿಬಿದ್ದಿದ್ದಾನೆ.
ಚಂದ್ರಯಾನ-3 : ವಿಕ್ರಮ್ ಲ್ಯಾಂಡರ್ ಲೈವ್ ಲಿಂಕ್’ಗಾಗಿ ಇಲ್ಲಿ ಕ್ಲಿಕ್ ಮಾಡಿ.
https://www.isro.gov.in/LIVE_telecast_of_Soft_landing.html
ಹೊಳಲೂರು ನಾಡ ಕಚೇರಿಯಲ್ಲಿ ಈ ಹಿಂದೆ ಸಹ ಅಕ್ರಮವಾಗಿ ಬಗರ್ ಹುಕುಂ ಭೂಮಿಗೆ ಖಾತೆ ಮಾಡಿಸಿಡಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂ. ಹಣ ಪಡೆದುಕೊಂಡು ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದರು ಎಂಬ ಆರೋಪವಿತ್ತು ಎನ್ನಲಾಗಿದೆ.