ಸರ್ಕಾರಿ ನೌಕರನ ಹಣೆಗೆ ಗನ್‌ ಇಟ್ಟು ಬೆದರಿಕೆ ಹಾಕಿದ ಭೂಪ.!

ಜನಸ್ಪಂದನ ನ್ಯೂಸ್, ಡೆಸ್ಕ್ : ದುಷ್ಕರ್ಮಿಗಳು ಸರ್ಕಾರಿ ಅಧಿಕಾರಿ ಹಣೆಗೆ ಗನ್‌ಪಾಯಿಂಟ್‌ ಇಟ್ಟ ಆಘಾತಕಾರಿ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿರುವ ಕನ್ಸುವಾ ಪಂಚಾಯತ್ ಕಟ್ಟಡದ ಸರ್ಕಾರಿ ಕಚೇರಿಯಲ್ಲಿ ನಡೆದಿದೆ.

ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ದುಷ್ಕರ್ಮಿಗಳ ಗುಂಪು ಸರ್ಕಾರಿ ಅಧಿಕಾರಿಗೆ ಹಣೆಗೆ ಗನ್‌ ಇಟ್ಟಿದ್ದಾನೆ.

ಗನ್‌ ಪ್ರದರ್ಶಿಸಿರುವ ಆರೋಪಿ ಓಂ ಪ್ರಕಾಶ್‌ ಅಲಿಯಾಸ್‌ ಬದ್ಧು ಯಾದವ್‌ ಎಂದು, ಬೆದರಿಕೆಗೆ ಒಳಗಾದ ಸರ್ಕಾರಿ ನೌಕರನನ್ನು ಅಮೀನ್ ಬಲ್ಮುಕುಂದ್ ಎಂದು ಗುರುತಿಸಲಾಗಿದೆ.

ನೌಕರನಿಗೆ ತನ್ನ ಕೆಲಸ ಮಾಡುವಂತೆ ಹೆದರಿಸಿ ಕೂಗಾಡಿದ್ದಾರೆ. ಅಲ್ಲದೆ ಮತ್ತೊಬ್ಬ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ನಡೆಸಿ, ಅಧಿಕಾರಿಯ ಫೋನ್‌ ಕಸಿದುಕೊಳ್ಳಲು ಯತ್ನಿಸಿದ್ದಾರೆ.

ಆರೋಪಿಯು ಇದು ನನ್ನ ಏರಿಯಾ, ಇಲ್ಲಿ ನಾನೇ ರಾಜಾ ಎಂದು ಗದರಿಸಿದ್ದಾನೆ. ತನ್ನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ವಾರ್ನಿಂಗ್‌ ಕೊಟ್ಟಿದ್ದಾನೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಕಚೇರಿಯೊಳಗಿದ್ದ ಉದ್ಯೋಗಿಯೊಬ್ಬರು ಹಲ್ಲೆ ನಡೆಸುತ್ತಿರುವಾಗ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.