5 ವರ್ಷದ ಮಗುವನ್ನು ಪದೇ ಪದೇ ನೆಲಕ್ಕೆ ಬಡಿದು ಹತ್ಯೆಗೈದ ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿ ; ಭಯಾನಕ ವಿಡಿಯೋ ನೋಡಿ.!

 

ಜನಸ್ಪಂದನ ನ್ಯೂಸ್, ಡೆಸ್ಕ್ : ಐದು ವರ್ಷದ ಬಾಲಕನನ್ನು ಸ್ವಾಮೀಜಿ ವೇಷಧಾರಿ ವೃದ್ಧ ಎತ್ತಿ ಪದೇ ಪದೇ ನೆಲಕ್ಕೆ ಬಡಿದು ಕೊಂದ ವಿಲಕ್ಷಣ ಘಟನೆ ಮಥುರಾದಲ್ಲಿ ನಡೆದಿದೆ.

ಸ್ವಾಮೀಜಿ ವೇಷ ಧರಿಸಿದ್ದ ಈ ವೃದ್ಧನನ್ನು 52 ವರ್ಷದ ಓಂಪ್ರಕಾಶ್ ಎಂದು ವರದಿಯಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಇದ್ದಕ್ಕಿದ್ದಂತೆ ದಾರಿಯಲ್ಲಿದ್ದ ಪುಟ್ಟ ಬಾಲಕನನ್ನು ನೆಲಕ್ಕೆ ಎಸೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸ್ಥಳೀಯರ ಪ್ರಕಾರ ಆರೋಪಿ ಸಪ್ತಕೋಸಿ ಯಾತ್ರೆ ನಡೆಸುತ್ತಿದ್ದ. ಮಗುವಿನ ತಂದೆ ಯಾತ್ರೆಯ ದಾರಿಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಆದರೆ ಅದೇನಾಯ್ತು ಗೊತ್ತಿಲ್ಲ ಓಂಪ್ರಕಾಶ್ ಅಪ್ರಾಪ್ತನನ್ನು ಎತ್ತಿಕೊಂಡು ಹಲವು ಸಲ ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಸದ್ಯ ಆರೋಪಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಚೇತರಿಸಿಕೊಂಡ ಬಳಿಕವಷ್ಟೇ ಆತನನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಕೃಪೆ : V News)