ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಡರ ಕಣ್ಣಪ್ಪ ಶಿವನಿಗೆ ನೇತ್ರಗಳನ್ನು ನೀಡಿದ ಹಾಗೆ ಇಲ್ಲೊಬ್ಬ ಭಕ್ತ ಶಿವನಿಗೆ ತನ್ನ ತಲೆಯನ್ನೇ ಕತ್ತರಿಸಿ ನೀಡಲು ಮುಂದಾದ ಘಟನೆ ಉತ್ತರ ಪ್ರದೇಶದ ಲಲಿತ್ ಪುರ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದಲ್ಲಿ ನಡೆದಿದೆ.
ರಘುನಾಥಪುರ ಗ್ರಾಮದ ನಿವಾಸಿ ದೀಪಕ್ ಕುಶ್ವಾಹ (28) ಎಂಬಾತನೇ ಶಿವನಿಗೆ ತನ್ನ ತಲೆಯನ್ನೇ ಕತ್ತರಿಸಿ ನೀಡಲು ಮುಂದಾಗಿದ್ದಾನೆ. ಈತ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಥಳೀಯ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ‘ಜೈ ಭೋಲೆನಾಥ್’ ಎಂದು ಘೋಷಣೆ ಕೂಗುತ್ತಾ ಬಲಿಪೀಠದ ಮುಂದೆ ಮರ ಕತ್ತರಿಸುವ ಯಂತ್ರವನ್ನು ಬಳಸಿ ಕತ್ತು ಕೊಯ್ದು ಕೊಂಡಿದ್ದಾನೆ.
ಆತನ ಕೂಗು ಕೇಳಿದ ಗ್ರಾಮಸ್ಥರು ದೇಗುಲಕ್ಕೆ ಓಡೋಡಿ ಬಂದು ನೋಡಿದ್ದಾರೆ. ಈ ವೇಳೆ ದೀಪಕ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಈ ವಿಚಾರವನ್ನು ಆತನ ಕುಟುಂಬ ಸದಸ್ಯರಿಗೆ ತಿಳಿಸಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಈ ಕುರಿತು ಮಾತನಾಡಿದ , ತನ್ನ ಮಗ ಶಿವನ ನಿಷ್ಠಾವಂತ ಅನುಯಾಯಿಯಾಗಿದ್ದಾನೆ. ಆತ ದೇವರಿಗೆ ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದ. ಕಳೆದ ಕೆಲವು ತಿಂಗಳುಗಳಲ್ಲಿ ಆತ ತನ್ನ ತಲೆಯನ್ನು ದೇವರಿಗ ಅರ್ಪಿಸುವ ಭಗವಾನ್ ಶಿವನನ್ನು ಮೆಚ್ಚಿಸುವ ಬಯಕೆ ಹೊಂದಿದ್ದನು ಎಂದು ಆತನ ತಂದೆ ಪಲ್ತೂರಾಮ್ ಕುಶ್ವಾಹಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ವಂತ ಆತ್ಮವನ್ನು ತ್ಯಾಗ ಮಾಡುವುದು ಹುಚ್ಚುತನ ಎಂದು ಆತನಿಗೆ ಯಾವಾಗಲೂ ಹೇಳುತ್ತಿದ್ದೆ, ಆದರೆ ಅವನು ಕಳೆದ ಒಂದು ತಿಂಗಳಿಂದಲೂ ಆತ್ಮ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದ. ಆತ ದೇವರಿಗಾಗಿ ಹಲವಾರು ಪ್ರಾರ್ಥನೆ ಗೀತೆಗಳನ್ನು ಬರೆದಿದ್ದಾನೆ ಎಂದು ಹೇಳಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. (ಏಜೆನ್ಸೀಸ್)